ಮೂಡುಬಿದಿರೆ: ಪೇಟೆಯ ಮುಖ್ಯರಸ್ತೆ ಬಳಿಯ ನಿವಾಸಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೂಡುಬಿದಿರೆ ನಿವಾಸಿ ರಾಘು ಪೈ(32) ಆತ್ಮಹತ್ಯೆ ಮಾಡಿಕೊಂಡ ಯುವಕ.

ಹಲವು ವರ್ಷದಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದ ಈತ ಕೆಲವು ತಿಂಗಳಿಂದ ಆಟೋ ರಿಕ್ಷಾ ಮಾರಿ, ಇತರ ವಾಹನಗಳಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಭಾನುವಾರ ರಾತ್ರಿ ಈತ ಮನೆಗೆ ಬಾರದಿರುವುದನ್ನು ಕಂಡು. ತಾಯಿ ಆತನು ಸ್ನೇಹಿತರಲ್ಲಿ ವಿಚಾರಿಸಿದ್ದಾರೆ. ಸೊಮವಾರ ಬೆಳಗ್ಗೆ ಮನೆ ಸಮೀಪವಿದ್ದ ಬಾವಿ ಬಳಿ ನೋಡುವಾಗ ಆತ, ತಾಯಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

By Suddi9

Leave a Reply

Your email address will not be published. Required fields are marked *