ಮಂಗಳೂರು:ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಮಂಗಳೂರಿನ ಕದ್ರಿ ಜೋಗಿ ಮಠಕ್ಕೆ ಹಲವಾರು ವರ್ಷಗಳ ಧಾರ್ಮಿಕ ನಂಟು ಇದೆ.ಆದರೆ ಕೇವಲ ಪ್ರಚಾರದ ತೆವಳು ಮತ್ತು ಒಂದು ಸಮುದಾಯ ಓಲೈಕೆಗಾಗಿ ಹವಣಿಸುತ್ತಿರುವ ಇಲ್ಲಿನ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಿಥುನ್ ರೈ ಏಕವಚನದಲ್ಲಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ.

ಸಿಎಂ ಯೋಗಿಮಂಗಳೂರಿಗೆ ಬಂದರೆ ಅವರ ಮುಖಕ್ಕೆ ಮಸಿ ಬಳಿಯುತ್ತೇನೆ ಎಂಬ ಅವರ ಹೇಳಿಕೆ ತೀರಾ ಬಾಲಿಶತನ ಮತ್ತು ಅವಿವೇಕತನದಿಂದ ಕೂಡಿದೆ. ಇಂತಹ ಹೇಳಿಕೆ ಸಮಸ್ತ ಹಿಂದೂ ಸಮಾಜ ಮತ್ತು ನಾಥ ಸಂಪ್ರದಾಯಕ್ಕೆ ಮಾಡಿದ ಅಪಮಾನ. ಈ ಹೇಳಿಕೆ ಖಂಡನೀಯವಾಗಿದ್ದು, ಮುಂದಿನ ದಿನಗಳಲ್ಲಿ ಸಮಸ್ತ ಜಾಗೃತ ಹಿಂದೂ ಸಮಾಜ ಇದಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಜನಾರ್ದನ ಅರ್ಕುಳ ಎಚ್ಚರಿಸಿದ್ದಾರೆ.
