ಬಂಟ್ವಾಳ: ನಗರ ಸ್ಥಳೀಯಾಡಳಿತ ಸಂಸ್ಥೆಗೆ ಬರೋಬ್ಬರಿ ಎರಡುವರ್ಷದ ಬಳಿಕ ಕೊನೆಗೂ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆಗೆ ಗುರುವಾರ ಮೀಸಲಾತಿ ಪ್ರಕಟಗೊಂಡಿದೆ. ಬಂಟ್ವಾಳ ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೂ,ಉಪಾಧ್ಯಕ್ಷ ಸ್ಥಾನವನ್ನು ಹಿ.ವರ್ಗ ಮಹಿಳೆ(ಬಿ) ಗೆ ಮಿಸಲಿರಿಸಿ ಸರಕಾರ ಆದೇಶಿಸಿ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ರಾಜ್ಯದ 29 ನಗರಸಭೆ,ಬಂಟ್ವಾಳ ಪುರಸಭೆ ಸಹಿತ 53 ಪುರಸಭೆ,20ಪಟ್ಟಣಪಂಚಾಯತ್ ಗೆ 2018 ಆಗಸ್ಟ್ 31 ರಂದು ಚುನಾವಣೆ ನಡೆದು, ಸೆ.3 ರಂದು ಫಲಿತಾಂಶ ಪ್ರಕಟವಾಗಿತ್ತು.ಆದರೆ ಅಧ್ಯಕ್ಷ ಉಪಾಧ್ಯಕ್ಷರ ಹುದ್ದೆಗೆ ಪ್ರಕಟಿತವಾಗಿದ್ದ ಮೀಸಲಾತಿ ಎರಡು ಬಾರಿ ನ್ಯಾಯಾಲಯದ ಕಟೆಕಟೆ ಏರಿದ್ದರಿಂದ ನೆನೆಗುದಿಗೆ ಬಿದ್ದಿತ್ತು.ಕೊನೆಗೂ ಎರಡುವರ್ಷದ ಬಳಿಕ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದೆ. ಬಂಟ್ವಾಳ ಪುರಸಭೆಯ ಒಟ್ಟು ೨೭ ಸ್ಥಾನಗಳ ಪೈಕಿ ಕಾಂಗ್ರೆಸ್ ೧೨, ಬಿಜೆಪಿ ೧೧ ಹಾಗೂ ಎಸ್‌ಡಿಪಿಐ ೪ ಸ್ಥಾನಗಳನ್ನು ಪಡೆದಿದ್ದು ಅಧ್ಯಕ್ಷ ಸ್ಥಾನಕ್ಕೆ ಎಲ್ಲರೂ ಆರ್ಹರೇ ಆಗಿದ್ದಾರೆ.
