ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಕಟ್ಟೆ ವಲಯ, ಶ್ರೀ ಶಾರದೋತ್ಸವ ಸಮಿತಿ ಸಿದ್ದಕಟ್ಟೆ,ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್  ಇದರ ಸಹಭಾಗಿತ್ವದಲ್ಲಿ ಉಚಿತ ಅಯುಷ್ಮಾನ್ ಭಾರತ್ ಯೋಜನೆಯ ನೋಂದಾವಣಿ ಮತ್ತು ಕಾರ್ಡ್ ವಿತರಣಾ ಕಾರ್ಯಕ್ರಮ ಸಿದ್ದಕಟ್ಟೆ ಹರ್ಷಾಲಿ ಸಭಾವನದಲ್ಲಿ ಮಂಗಳವಾರ ನಡೆಯಿತು. ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಅವರು ಅತಿಥಿಯಾಗಿ ಭಾಗವಹಿಸಿ ಫಲಾನುಭವಿಗಳಿಗೆ ಕಾರ್ಡ್ ವಿತರಿಸಿದರು.  ಇದೇ ವೇಳೆ ಸಿದ್ದಕಟ್ಟೆ ಸಾರ್ವಜನಿಕ ಶ್ರೀಶಾರದೋತ್ಸವದ ದ್ವಿತೀಯ ವರ್ಷದ ಆಮಂತ್ರಣ ಪತ್ರವನ್ನು ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್,ಸಿದ್ದಕಟ್ಟೆ ಶಾರದೋತ್ಸವ ಸಮಿತಿಯ ಅಧ್ಯಕ್ಷ ಲೋಕೇಶ್ ಶೆಟ್ಟಿ ಮೈಲೊಟ್ಟಿ, ಶಿವಾನಂದ ರೈ, ಎಂ ರಮೇಶ್ ಮಂಜಿಲ, ಉಮೇಶ್ ಹಿಂಗಣಿ,ಶಿವಾನಂದ ರೈ, ದಿನೇಶ್ ಶೆಟ್ಟಿಗಾರ್, ಸದಾನಂದ್ ಶೀತಲ್, ವಿನೋದ್ ರಾಜ್ ಕೊಯಿಲ, ಅಶೋಕ್ ಆಚಾರ್ಯ, ದಿನೇಶ್ ಸುಂದರ್ ಶಾಂತಿ,ಶ್ರೀಧರ್ ಪೈ ವಾಮದಪದವು,ಯತೀಶ್ ಶೆಟ್ಟಿ,ದಾಮೋದರ ನಾಯ್ಕ್  ಕರ್ಪೆ,ದೇವಪ್ಪ ಕರ್ಕೇರ ನೆಕ್ಕರೆಕುರಿ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ,ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಜಗದೀಶ್ ಕೊಯಿಲ,ಜಯಪ್ರಕಾಶ್ ಕೊಯಿಲ, ದಾಮೋದರ ಆಚಾರ್ಯ ಕೊಯಿಲ,ಶೀತರಾಮ ಶಾಂತಿ ಕಂಬಳಕೊಡಿ,ಜಯಕರ ಶೆಟ್ಟಿ ಸಿದ್ದಕಟ್ಟೆ,ದಾಮೋದರ್ ದೊಟ,ಸುಜಿಂದ್ರ ಶೆಟ್ಟಿ ,ರಮೇಶ್ ನಾಯ್ಕ್ ರಾಯಿ,ನಾಗೇಶ್ ಶೆಟ್ಟಿ ಅಟ್ಲಾಬೆಟ್ಟು,ಸರೀತಾ ಮಂಚಕಲ್ಲು, ದಿನೇಶ್ವರಿ,ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,ಪ್ರೀತಮ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *