ಬಂಟ್ವಾಳ: ಗ್ರಾಮ ಪಂಚಾಯತ್ ಗಳ ತಲಾ ಅನುದಾನ ಲಕ್ಷದಿಂದ ಕೋಟಿಗೆ ಏರಿಕೆ ಮಾಡುವುದರ ಜೊತೆಗೆ ಪಂಚಾಯತ್ ರಾಜ್ ಸಬಲೀಕರಣಗೊಳ್ಳಲು ಕೇಂದ್ರ ಸರ್ಕಾರ ಕಟಿಬದ್ದವಾಗಿದ್ದು , 14 ಮತ್ತು 15 ನೇ ಹಣಕಾಸು ಯೋಜನೆಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯತ್ ಗೆ 75 ಲಕ್ಷ ದಿಂದ 1 ಕೋಟಿ ತನಕ ಅನುದಾನ ಬಿಡುಗಡೆಯಾಗಿರುತ್ತದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್,ಉಳಿಪಾಡಿ ಅವರು ತಿಳಿಸಿದ್ದಾರೆ. ಬಂಟ್ವಾಳ ಕ್ಷೇತ್ರದ ಕನ್ಯಾನದ ಶ್ರೀ ಗುರುದೇವ ಕಲ್ಯಾಣ ಮಂಟಪದಲ್ಲಿ ನಡೆದ ಕೋಳ್ನಾಡು ಮಹಾಶಕ್ತಿ ಕೇಂದ್ರಕ್ಕೊಳಪಟ್ಟ ಕನ್ಯಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿ.ಜೆ.ಪಿ.ಕುಟುಂಬ ಮೀಲನ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಅವರು ಮಾತಾನಾಡುತ್ತಿದ್ದರು.
ಗ್ರಾಪಂಗೆ ಅನುದಾನ ಏರಿಕೆಯ ಪ್ರಗತಿ ಕಾಣಲು ದೇಶದ ನಾಯಕತ್ವ ಬದಲಾವಣೆಯಿಂದಾಗಿ ಮಾತ್ರ ಸಾದ್ಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗೇಸ್ ಬೆಂಬಿಲಿತ ಆಡಳಿತವಿರುವ ಗ್ರಾಮ ಪಂಚಾಯತ್ ಗಳಲ್ಲಿ ನಾಯಕತ್ವ ಬದಲಾಯಿಸಿ ಬಿ.ಜೆ.ಪಿ.ಬೆಂಬಲಿತರ ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟನೆಗೈದ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಮಾತಾನಾಡಿ ಹಳ್ಳಿಯಿಂದ -ದೆಹಲಿ ತನಕ ಬಿ.ಜೆ.ಪಿ.ಒಂದು ಕುಟುಂಬವಾಗಿದೆ.ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಕುಟುಂಬದಲ್ಲಿ ಸಣ್ಣಪುಟ್ಟ ಬಿನ್ನಾಭಿಪ್ರಾಯವಿದ್ದರೂ ನಾವೆಲ್ಲರೂ ಒಂದೇ ಕುಟುಂಬ ಎಂಬ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಬಿ.ಜೆ.ಪಿ.ಪಂಚಾಯತ್ ಆಡಳಿತ ಬರುವಂತೆ ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು.
ಬಂಟ್ವಾಳ ಮಂಡಲ ಗ್ರಾಮ ಪಂಚಾಯತ್ ಚುನಾವಣಾ ಪ್ರಭಾರಿ ದೇವದಾಸ್ ಶೆಟ್ಟಿ ಕೇಂದ್ರ ಮತ್ತು ರಾಜ್ಯದ ಯೋಜನೆ ಮಾಹಿತಿ ನೀಡಿದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಲ ಬಿ.ಜೆ.ಪಿ.ಅಧ್ಯಕ್ಷ ದೇವಪ್ಪ ಪೂಜಾರಿ ಮಾತಾನಾಡಿ ಬಂಟ್ವಾಳ ಕ್ಷೇತ್ರದಾದ್ಯಂತ ಬಿ.ಜೆ.ಪಿ.ಪರವಾದ ಒಲವು ಕಂಡು ಬಂದಿದೆ, ಕಾಂಗ್ರೇಸಿಗರ ಯಾವುದೇ ಬೆದರಿಕೆಗೆ ಬಿ.ಜೆ.ಪಿ.ಕಾರ್ಯಕರ್ತರು ಹೆದರ ಬೇಕಾಗಿಲ್ಲ ನಮ್ಮ ಕಾರ್ಯಕರ್ತರ ರಕ್ಷಣೆಗೆ ಪಕ್ಷ ಸದಾ ಸಿದ್ದವಿದೆ ಎಂದರು.
ಸಭೆಯಲ್ಲಿ ಬಿ.ಜೆ.ಪಿ.ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ,ರವೀಶ್ ಶೆಟ್ಟಿ ಕರ್ಕಳ,ಮಂಡಲ ಪಂಚಾಯತ್ ಚುನಾವಣಾ ಸಹ ಪ್ರಭಾರಿ ಪ್ರಭಾಕರ ಪ್ರಭು,ಕೊಳ್ನಾಡು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ,ಯುವ ಮೊರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು,ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಲೋಹಿತ್ ಸಾಲೆತ್ತೂರು,ಕನ್ಯಾನ ಗ್ರಾಮ ಚುನಾವಣಾ ಪ್ರಭಾರಿ ಕೆ, ಪಿ, ರಘುರಾಮ ಶೆಟ್ಟಿ,ಸಹಪ್ರಭಾರಿ ಮನೋಜ್ ಬನಾರಿ,ಕ್ಷೆತ್ರ ಉಪಾಧ್ಯಕ್ಷ ಜಯರಾಮ ಕುಂಟ್ರಕಲ, ಕೊಳ್ನಾಡು ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಲೋಹಿತ್ ಕೊಳ್ನಾಡು,ಕೊಳ್ನಾಡು ಪ್ರಭಾರಿ ಅಭಿಷೇಕ್ ರೈ ಉಪಸ್ಥಿತರಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಲಿಂಗಪ್ಪ ಗೌಡ ಸ್ವಾಗತಿಸಿ, ಮಾತೇಶ್ ಭಂಡಾರಿ ಕಾರ್ಯಕ್ರಮ ನಿರ್ವಾಹಿಸಿದರು. ಬಾಲಕೃಷ್ಣ ಸೆರ್ಕಳ ವಂದಿಸಿದರು.
