ಬಂಟ್ವಾಳ: ಬಿಜೆಪಿ ಪುದು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಫರಂಗಿಪೇಟೆ ಸಭೆ ಮಾರಿಪಳ್ಳ ಕುಲಾಲ ಭವನ ದಲ್ಲಿ ಭಾನುವಾರ ನಡೆಯಿತು . ಸಭೆಯ ಅಧ್ಯಕ್ಷತೆಯನ್ನು ಬಿ ಜೆ ಪಿ ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ರವರು ವಹಿಸಿ ಮಾತನಾಡಿ ಪಕ್ಷ ಬಲವರ್ಧನೆ ಜೊತೆಗೆ ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷವು ನಿರ್ದಿಷ್ಟ ಗೆಲುವು ಸಾಧಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ಕರೆ ನೀಡಿದರು.
ಜಿಲ್ಲಾ ಬಿ ಜೆ ಪಿ ಉಪಾಧ್ಯಕ್ಷ ಪುದು ಮಹಾ ಶಕ್ತಿ ಕೇಂದ್ರದ ಪ್ರಭಾರಿಗಳಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಕಾರ್ಯ ಕರ್ತರಿಗೆ ಮಾರ್ಗದರ್ಶನ ನೀಡಿದರು . ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ಕುಂಪಲ ,ಜಯಶ್ರೀ ಕರ್ಕೆರಾ , ಮಂಗಳೂರು ಮಂಡಲ ಕಾರ್ಯದರ್ಶಿಗಳಾದ ಹೇಮಂತ್ ಶೆಟ್ಟಿ , ನವೀನ್ ಪಾದಲ್ಪಾಡಿ , ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ , ಕ್ಷೇತ್ರ ಉಪಾಧ್ಯಕ್ಷೆ ಹರಿಣಾಕ್ಷಿ , ಪುದು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ , ಉಪಸ್ಥಿತರಿದ್ದರು ಬಿ ಜೆ ಪಿ ಪುದು ಮಹಾ ಶಕ್ತಿ ಕೇಂದ್ರ ಕಾರ್ಯದರ್ಶಿ ಸತೀಶ್ ನಾಯ್ಗ ಸ್ವಾಗತಿಸಿದರು , ಪ್ರವೀಣ್ ಶೆಟ್ಟ ನಿರೂಪಿಸಿದರು
