ಬಂಟ್ವಾಳ: ಸೇವಾಂಜಲಿ.ಪ್ರತಿಷ್ಠಾನ .ಪರಂಗಿಪೇಟೆ  |ಜ| ಕೆ.ಎಸ್ ಹೆಗ್ಡೆ ಆಸ್ಪತ್ರೆಆರೋಗ್ಯಧಿಕಾರಿಗಳು  ಸೆ. 27 ರಂದು ಭಾನುವಾರ ಬಂಟ್ವಾಳ ತಾಲೂಕು ಕಂದಾಯ ಇಲಾಖಾ ಸಿಬ್ಬಂದಿಗಳಿಗೆ  ತಪಾಸಣಾ ಶಿಬಿರವು  ಬಿ ಸಿ ರೋಡು ಮಿನಿ ವಿಧಾನ ಸೌಧದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿ ಕರ್ತವ್ಯದ ಒತ್ತಡಗಳ ಮಧ್ಯೆ ಆರೋಗ್ಯವನ್ನು ಕಡೆಗಣಿಸಬೇಡಿ. ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದು ಸಿಬ್ಬಂದಿಗಳಿಗೆ ಹೇಳಿದರು .ceafcf0d-3690-46b7-a4dd-e8ac2d47d465

ಪ್ರತಿಪ್ರತಿಷ್ಠಾನದ ಆಡಳಿತ ಟ್ರಸ್ಟಿ ಶ್ರೀ ಕೃಷ್ಣ ಕುಮಾರ್ ಪೂಂಜಾ ರವರು ಮಾತನಾಡಿ ಸಹೋದ್ಯೋಗಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ತಹಶೀಲ್ದಾರರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಇತರರಿಗೆ ಆದರ್ಶ ಎಂದು ಹೇಳಿದರು .ಡಾ ಸುರೇಶ್ ಉಪಸ್ಥಿತರಿದ್ದರು.fdc41e24-aa17-4a77-abc8-69322cf6e020

ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಪ್ರಸಿದ್ಧ ಹೃದಯ ತಜ್ಞ ಡಾ. ಕೆ ಸುಬ್ರಹ್ಮಣ್ಯ ರವರು ಹೃದಯದನುಬಂಧ ಕಾಯಿಲೆ ಮತ್ತು ಮುಂಜಾಗ್ರತೆ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಡಾ ಪ್ರೇರಣಾರವರು ಉತ್ತಮ ಜೀವನ ಪದ್ಧತಿಗಳ ಬಗ್ಗೆ ಮಾಹಿತಿ ಒದಗಿಸಿದರು. ಮನಃಶಾಸ್ತ್ರಜ್ಜಡಾ.ಸಂತೋಷ್ ಪ್ರಭು ಮಾನಸಿಕ ಸಮತೋಲನ ಬಗ್ಗೆ ಮಾಹಿತಿ ನೀಡಿದರು. ಡಾ.ಗೋವಿಂದ ರಾಜ್ ಭಟ್ ರವರು ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಿದರು.9e1118ff-7f80-4a12-b910-d9890fc67377

ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಭುಮಾಪನ ಇಲಾಖೆ ಸಿಬ್ಬಂದಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.e6b202eb-b232-48cc-9d8b-22f5edcfe03d

By suddi9

Leave a Reply

Your email address will not be published. Required fields are marked *