ಬಂಟ್ವಾಳ : ಅಮೆಚೂರು ಕಬಡ್ಡಿ ಎಸೋಸಿಯೇಶನ್ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡ್ – ಪರ್ಲಿಯದಲ್ಲಿ ನಡೆಯಿತು.ಎಸೋಸಿಯೇಶನ್ ನ ಸಕ್ರಿಯ ಸದಸ್ಯ, ಕಾವಳಕಟ್ಟೆ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಹಾಗೂ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಅನಿತಾ ದಂಪತಿಗಳ ಪುತ್ರ ಬಂಟ್ವಾಳ ಎಸ್.ವಿ.ಎಸ್.ವಿಧ್ಯಾಗಿರಿ ಆಂಗ್ಲ ಮಾದ್ಯಮ ಶಾಲಾ ವಿಧ್ಯಾರ್ಥಿ ಮಿಥಿಲ್ ಜೆ 615 ಅಂಕಗಳೊಂದಿಗೆ ಶೇಕಡಾ 98.4 ಪಲಿತಾಂಶ ದಾಖಲಿಸಿದ್ದರು.
ವಿಧ್ಯಾರ್ಥಿಯ ಪರ್ಲಿಯಾ ನಿವಾಸದಲ್ಲಿ ನಡೆದ ಈ ಸರಳ ಸಮಾರಂಭದ ಅದ್ಯಕ್ಷತೆಯನ್ನು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಎಸೋಸಿಯೇಶನ್ ಅದ್ಯಕ್ಷ ಬೇಬಿ ಕುಂದರ್ ವಹಿಸಿದ್ದರು. ಎಸೋಸಿಯೇಶನ್ ನ ಗೌರವಾದ್ಯಕ್ಷ ರೊಟೇರಿಯನ್ ಮಂಜುನಾಥ್, ಕಾರ್ಯಾದ್ಯಕ್ಷ ಪುಷ್ಪರಾಜ್ ಚೌಟ, ಉಪಾದ್ಯಕ್ಷರುಗಳಾದ ಲೋಕನಾಥ ಶೆಟ್ಟಿ, ಬಾಬು ಮಾಸ್ಟರ್, ಸೇಸಪ್ಪ ಮಾಸ್ಟರ್, ರೆಫ್ರಿ ಬೋರ್ಡ್ ಕನ್ವೀನರ್ ಕೃಷ್ಣಪ್ಪ ಬಂಗೇರ, ಕೋಶಾಧಿಕಾರಿ ಉಮಾನಾಥ ರೈ ಮೇರಾವು , ಮಾಜಿ ಯೋಧ ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.ಎಸೋಸಿಯೇಶನ್ ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಕರ್ಣ ಸ್ವಾಗತಿಸಿ ವಂದಿಸಿದರು, ಜೊತೆ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ನಿರೂಪಿಸಿದರು.


