ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ.ಟ್ರಸ್ಟ್ ಬಂಟ್ವಾಳ ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಬಿ‌.ಸಿ.ರೋಡ್ ವಲಯದ  ಆಚಾರಿಪಲ್ಕೆ ಒಕ್ಕೂಟದ ವತಿಯಿಂದ ಅಯುಷ್ಮಾನ್ ಕಾರ್ಡ್ ನೋಂದಾವಣೆ ಹಾಗೂ ವಿತರಣೆ ಕಾರ್ಯಕ್ರಮ  ಪಂಚಾಯತ್ ಬಳಿ ನಡೆಯಿತು.  ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಸುದರ್ಶನ್ ಜೈನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶ ದ ಜನರಿಗೆ ಉತ್ತಮವಾದ ಮಾಹಿತಿ ನೀಡುವುದರ ಜತೆಗೆ ಸರಕಾರದ  ಸವಲತ್ತುಗಳನ್ನುಸುಲಭ ರೂಪದಲ್ಲಿ ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುವುದು ಅಭಿನಂದನೀಯವಾಗಿದೆ  ಎಂದರು.  IMG-20200906-WA0038
ಬಂಟ್ವಾಳ ತಾಲೂಕಿನ ಯೋಜನಾಧಿಕಾರಿಯವರಾದ ಜಯಾನಂದ. ಪಿ, ಭಾಗವಹಿಸಿ ಗ್ರಾಮಾಭಿವೃದ್ಧಿ  ಕರ್ನಾಟಕ ರಾಜ್ಯದಾದ್ಯಂತ ಯೋಜನೆಯ ಕಾರ್ಯಾಚರಿಸುತ್ತಿದ್ದು,ಸಂಘದ ಎಲ್ಲ ಸದಸ್ಯರಿಗೂ ಯೋಜನೆಯಿಂದ  ಕೃಷಿ,  ಅರೋಗ್ಯ ದ ಮಾಹಿತಿ ಸಹಿತ ಎಲ್ಲಾ  ವಿಷಯ ಗಳ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರಲ್ಲದೆ ಅಯುಷ್ಮಾನ್ ಕಾರ್ಡ್ ನ ಉಪಯೋಗ ದ ಬಗ್ಗೆಯು ವಿವರಿಸಿದರು.       ಈ ಸಂದರ್ಭದಲ್ಲಿ ಬಿ.ಸಿ.ರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ, ಅಚಾರಿಪಲ್ಕೆ ಒಕ್ಕೂಟದ ಅಧ್ಯಕ್ಷ  ರಾಜೇಶ್ ಗೌಡ ,
ಜನಜಾಗೃತಿ ವೇದಿಕೆಯ ಸದಸ್ಯರಾದ ದೇವಪ್ಪ ಕುಲಾಲ್ ,ವಿಕಾಸ  ಸಮನ್ವಯಾದಿಕಾರಿ  ಸ್ವಪ್ನ  ಉಪಸ್ಥಿತರಿದ್ದರು.  ವಲಯದ ಮೇಲ್ವಿಚಾರಕರಾದ ಕೇಶವ ಸ್ವಾಗತಿಸಿ, ಸೇವಾ ಪ್ರತಿನಿಧಿ ರೇವತಿ ವಂದಿಸಿದರು.

By suddi9

Leave a Reply

Your email address will not be published. Required fields are marked *