ಬಂಟ್ವಾಳ: ತಾಲೂಕು ಕೃಷಿಕ ಸಮಾಜ ಸಭೆಯು ಬಿ.ಸಿ.ರೋಡಿನಲ್ಲಿರುವ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ನಡೆಯಿತು. ರಾಜ್ಯ ಕೃಷಿಕ ಸಮಾಜದ ಮೈಸೂರು ವಿಭಾಗೀಯ ಕಾರ್ಯದರ್ಶಿ ಪದ್ಮನಾಭ ರೈ ಸಭಾಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಅಶೋಕ ಕುಮಾರ್ ಬರಿಮಾರು ಇವರ ಆತ್ಮಕ್ಕೆ ಸದ್ಗತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಕ ನಿರ್ಣಯವನ್ನು ಕೈಗೊಳ್ಳಲಾಯಿತು.
ತಾಲೂಕು ಕೃಷಿಕ ಸಮಾಜದ ಸದಸ್ಯರಾದ ಗಣೇಶ ಶೆಟ್ಟಿ ಗೊಳ್ತಮಜಲು, ಬದ್ರುರುದ್ದೀನ್ ಮಂಚಿ, ಬಿ. ಶಂಕರ ನಾರಾಯಣ ಹೊಳ್ಳ, ಉಮ್ಮರ್ ಮಂಚಿ, ಆಲ್ಬರ್ಟ್ ಮಿನೇಜಸ್ ನರಿಕೊಂಬು, ರಮಾನಾಥ ವಿಟ್ಲ ಹಾಗೂ ಕಛೇರಿ ಸಿಬ್ಬಂಧಿಗಳು ಭಾಗವಹಿಸಿದ್ದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕರಾದ ಕೆ. ನಾರಾಯಣ ಶೆಟ್ಟಿಯವರು ಸ್ವಾಗತಿಸಿ,ಕೊನೆಯಲ್ಲಿ ವಂದಿಸಿದರು.
