ಕೋಲಾರ : ಕೋವಿಡ್ 19 ನ ಆರೋಗ್ಯ ತುರ್ತುಪರಿಸ್ಥಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆಯು ಶ್ಲಾಘನೀಯ ಎಂದು ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ತಿಳಿಸಿದರು . ಇಂದು ಮಾಲೂರಿನ ಜೆ ಎಸ್ ಎಸ್ ಹೈಸ್ಕೂಲ್ ಆವರಣದಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಮಾಲೂರು ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ತಾಲ್ಲೂಕು ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಚೆಕ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ರಾಜ್ಯಾದ್ಯಂತ ಇದುವರೆಗೆ 25 ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯದಲ್ಲಿ 42,537 ಆಶಾ ಕಾರ್ಯಕರ್ತೆಯರಿದ್ದು ಶೇ 95 ರಷ್ಟು ಆಶಾ ಕಾರ್ಯಕರ್ತೆಯರಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹಧನವನ್ನು ವಿತರಿಸಲಾಗಿದೆ ಎಂದರು .fe6d08e0-7b3c-4d56-8b07-5d853e100d8b

ಸಹಕಾರ ಇಲಾಖೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ 53 ಕೋಟಿ ರೂಪಾಯಿ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ . ರಾಜ್ಯದಲ್ಲಿ ಹೆಚ್ಚಿನ ಲಾಭಾಂಶವಿರುವ ಒಕ್ಕೂಟಗಳಿಂದ ಹಣವನ್ನು ಪಡೆದು ಕೋವಿಡ್ 19 ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವಾಗಿ ವಿತರಿಸಲಾಗಿದೆ . ಆಶಾ ಕಾರ್ಯಕರ್ತೆಯರ ವೇತನವನ್ನು ಹೆಚ್ಚಿಸಬೇಕು ಎಂದು ಈಗಾಗಲೇ ಆರೋಗ್ಯ ಸಚಿವರಾದ ಶ್ರೀರಾಮುಲು ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್ ಅವರು ಮುಖ್ಯಮಂತ್ರಿಗಳ ಜತೆ ಚರ್ಚಿಸಿದ್ದು , ಅಧಿಕೃತವಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದರು .140ec041-90cf-40e6-a73d-b089cd190cef

ಇದೇ ತಿಂಗಳ 25 ರಂದು ವಿಧಾನಸೌಧದಲ್ಲಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 21 ಡಿಸಿಸಿ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಸಹಕಾರ ಇಲಾಖೆ ಉನ್ನತ ಅಧಿಕಾರಿಗಳ ಜತೆಯಲ್ಲಿ ಸಭೆ ನಡೆಯಲಿದ್ದು , ಡಿಸಿಸಿ ಬ್ಯಾಂಕ್‌ಗಳಲ್ಲಿ ಆಶಾ ಕಾರ್ಯಕರ್ತೆಯರಿಗೂ ಸಾಲ ನೀಡುವಂತೆ ಚರ್ಚಿಸಲಾಗುವುದು . ಕಳೆದ ಸಾಲಿನಲ್ಲಿ 13,500 ಸಾವಿರ ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ . ಈ ವರ್ಷದಲ್ಲಿ 14,500 ಸಾವಿರ ರೂಪಾಯಿ ಸಾಲ ವಿತರಿಸುವ ಗುರಿ ಇದ್ದು , ಇದರಿಂದ 10,22518 ರೈತರಿಗೆ ಅನುಕೂಲವಾಗಲಿದೆ ಎಂದರು , ರೈತರು ತಾವು ಬೆಳೆದ ಬೆಳೆಗಳನ್ನು ರೈತರು ಎಲ್ಲಿ ಬೇಕಾದರೂ ಮಾರಾಟ ಮಾಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ ಇದರಿಂದ ರೈತರಿಗೆ ಅನುಕೂಲವಾಗಲಿದೆ . ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಸೆಸ್ ಹಣವನ್ನು 0.35 ಪೈಸೆಗೆ ಇಳಿಸಲಾಗಿದೆ .41f2b8fb-2f1a-4122-895b-99f05ca3af6d

ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 4 ಎಕರೆ ಜಮೀನು ಅವಶ್ಯಕತೆ ಇದೆ ಎಂದು ಬೇಡಿಕೆ ಇದ್ದು , ಸರ್ಕಾರದ ಮಾರ್ಗಸೂಚಿಗಳನ್ನು ನೋಡಿ ಮುಂದಿನ ತಿರ್ಮಾನ ಮಾಡಲಾಗುವುದು ಎಂದು ತಿಳಿಸಿದರು , ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ನಾಗೇಶ್ ಅವರು ಮಾತನಾಡಿ , ಕೋವಿಡ್ 19 ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ . ಈಗಾಗಲೇ ಸರ್ಕಾರದಿಂದ 3 ಸಾವಿರ ರೂಪಾಯಿ ಚೆಕ್ ವಿತರಣೆ ಮಾಡಲಾಗಿದ್ದು , ಮಾಲೂರು ತಾಲ್ಲೂಕಿನ ಆಶಾ ಕಾರ್ಯಕರ್ತೆಯರಿಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ಸುಮಾರು 24 ಲಕ್ಷ ರೂಪಾಯಿ ಚೆಕ್ ಮೂಲಕ ನೀಡಲಾಗುತ್ತಿದೆ ಎಂದರು . ಆಶಾ ಕಾರ್ಯಕರ್ತೆಯರು ತಮ್ಮ ಕೆಲಸದ ನಂತರ ವೈಯಕ್ತಿಕವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು . ಜಿಲ್ಲೆಯಲ್ಲಿ ಇದುವರೆಗೂ 2611 ಕರೋನಾ ಸೋಂಕು ದೃಡಪಟ್ಟಿದು . ಪ್ರತಿದಿನ ಸರಾಸರಿ 100 ಕರೋನಾ ಸೋಂಕು ದೃಡಪಡುತ್ತಿದ್ದು , 44 ಜನ ಕರೋನದಿಂದ ಮೃತಪಟ್ಟಿರುತ್ತಾರೆ .37a4bd2a-e847-4584-8875-961c39cad987

ಜಿಲ್ಲೆಯಲ್ಲಿ ಕರೋನಾದಿಂದ ಗುಣಮುಖರಾಗುವರ ಪ್ರಮಾಣ ಹೆಚ್ಚಾಗಿದೆ . ಕರೋನಾವನ್ನು ನಿಯಂತ್ರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದರು . ಸಂಸದರದೆ ಎಸ್ ಮುನಿಸ್ವಾಮಿ ಅವರು ಮಾತನಾಡಿ , ಕೊವಿಡ್ 19 ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯು ಅತ್ಯಗತ್ಯವಾಗಿದ್ದು , ಕರೋನಾ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ . ಜಿಲ್ಲೆಯನ್ನು ಕರೋನಾ ಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು .

ಜಿಲ್ಲೆಯು ಸುಮಾರು 48 ದಿನಗಳ ಕಾಲ ಹಸಿರು ವಲಯದಲ್ಲಿ ಇತ್ತು , ತದನಂತರದಲ್ಲಿ ಜಿಲ್ಲೆಯಲ್ಲಿ ಕರೋನಾ ಸೋಂಕು ದೃಡಪಟ್ಟಿತು , ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹಲವಾರು ರಾಜ್ಯಗಳಿಂದ ವರ್ತಕರು ಹಾಗೂ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ . ಮಾರುಕಟ್ಟೆಗೆ ಜಾಗದ ಸಮಸ್ಯೆ ಇದ್ದು ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಜಾಗ ನೀಡಲು ಸಹಕಾರ ಸಚಿವರಲ್ಲಿ ಮನವಿ ಮಾಡಿದರು . ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ವೈ ನಂಚೇಗೌಡ ಅವರು ಮಾತನಾಡಿ , 1987 ರಲ್ಲಿ ಬೆಂಗಳೂರಿನಿಂದ ಬೇರ್ಪಟ್ಟು ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸ್ಥಾಪನೆ ಆಯಿತು .

ಹಾಲು ಉತ್ಪಾದನೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 2 ನೇ ಸ್ಥಾನದಲ್ಲಿದೆ . ಕೋವಿಡ್ 19 ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯ 2008 ಆಶಾ ಕಾರ್ಯಕರ್ತೆಯರಿಗೆ 12.51 ಕೋಟಿ ರೂಪಾಯಿ ಹಣವನ್ನು ಪ್ರೋತ್ಸಾಹ ಧನವಾಗಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು . 200 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿಯನ್ನು ನಿರ್ಮಿಸಲಾಗಿದೆ . ಅದೇ ರೀತಿಯಲ್ಲಿ ಕೋಲಾರ ಜಿಲ್ಲೆಯಲ್ಲೂ ಎಂ ವಿ ಕೃಷ್ಣಪ್ಪ ಹೆಸರಿನಲ್ಲಿ ಎಂ.ವಿ.ಕೆ ಗೊಲ್ಡನ್ ಡೈರಿ ಗೆ ಗುದ್ದಲಿ ಪೂಜೆ ನೆರವೇರಿದ್ದು ತಮ್ಮ ಸರ್ಕಾರದಲ್ಲಿಯೇ ಗೊಲ್ಡನ್ ಡೈರಿಯ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸುವಂತೆ ಮುಖ್ಯಮಂತ್ರಿಗಳ ಜತೆ ಚರ್ಚಿಸಬೇಕು .

ಕೋವಿಡ್ 19 ಹಿನ್ನೆಲೆ ಸರ್ಕಾರಿ ಶಾಲೆಗಳು ಮುಚ್ಚಿದ್ದು , ಬಿಸಿ ಊಟ ಯೋಜನೆಯಡಿ ಊಟದ ಸಾಮಾಗ್ರಿಯನ್ನು ಶಾಲಾ ಮಕ್ಕಳಿಗೆ ನೇರವಾಗಿ ಅವರವರ ಮನೆಗೆ ತಲುಪಿಸುತ್ತಿದ್ದಾರೆ . ಅದೇ ರೀತಿ ಒಕ್ಕೂಟದ ಹಾಲಿನ ಪುಡಿ ನೀಡಬೇಕು ಮತ್ತು ಪಡಿತರ ಜತೆಗೆ ಹಾಲಿನ ಪುಡಿ ವಿತರಣೆ ಮಾಡುವಂತೆ ಸರ್ಕಾರದ ಜತೆ ಚರ್ಚೆ ನಡೆಸಬೇಕು ಎಂದು ಸಹಕಾರ ಸಚಿವರಿಗೆ ಮನವಿ ಮಾಡಿದರು .

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು , ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕರುಗಳಾದ ಕೆ ಎನ್ ನಾಗರಾಜು , ವೈ ಬಿ ಅಶ್ವಥ್ ನಾರಾಯಣ , ಎನ್ ಹನುಮೇಶ್ , ಆರ್ ಶ್ರೀನಿವಾಸ್ , ಸುನಂದಮ್ಮ , ಕಾಂತಮ್ಮ , ಸಹಕಾರ ಇಲಾಖೆಯ ಉಪನಿಬಂಧಕರಾದ ಸಿದ್ದನಗೌಡ ನೀಲಪ್ಪನವರ್ ,ಶ್ರೀನಿವಾಸ್ , ಸುನಂದಮ್ಮ , ಕಾಂತಮ್ಮ , ಸಹಕಾರ ಇಲಾಖೆಯ ಉಪನಿಬಂಧಕರಾದ ಸಿದ್ದನಗೌಡ ನೀಲಪ್ಪನವರ್ , ಡಿಸಿಸಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿ , ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಪ್ರಸನ್ನಕುಮಾರ್ ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು , ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

By Suddi9

Leave a Reply

Your email address will not be published. Required fields are marked *