ಮಂಗಳೂರು: ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 587 (97.8%) ಅಂಕ ಗಳಿಸಿ, ನಾಲ್ಕು ವಿಷಯಗಳಲ್ಲಿ ತಲಾ 100 ಅಂಕ ಗಳಿಸಿ (ಇತಿಹಾಸ, ರಾಜ್ಯಶಾಸ್ರ್ರ, ಸಮಾಜಶಾಸ್ತ್ರ, ಅರ್ಥಶಾಸ್ತ್ರ) ರಾಜ್ಯಕ್ಕೆ ಏಳನೇ(7) ಸ್ಥಾನ ಮತ್ತು ದ.ಕ.ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕು| ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರಿಗೆ ಕಥೊಲಿಕ್ ಸಭಾ ಮದರ್ ತೆರೆಜಾ ವಲಯ ಸುರತ್ಕಲ್ ವತಿಯಿಂದ ಸನ್ಮಾನಿಸಲಾಯಿತು. ಇವರು ರೊನಾಲ್ಡ್ ಫೆರ್ನಾಂಡಿಸ್ ಮತ್ತು ನ್ಯಾಸ್ಸಿ ಡೊರತಿ ಫೆರ್ನಾಂಡಿಸ್ ದಂಪತಿಯವರ ಪುತ್ರಿ .
ವಿಕ್ಟೋರಿಯಾ ಪದವಿಪೂರ್ವ ಕಾಲೇಜು ಲೇಡಿಹಿಲ್ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿ ಕೇಂದ್ರೀಯ ಕಥೊಲಿಕ್ ಸಭಾ ಅಧ್ಯಕ್ಷ ರೊಲ್ಫಿ ಡಿಕೋಸ್ತಾ ಕಥೊಲಿಕ್ ಸಭಾ ಮದರ್ ತೆರೆಜಾ ವಲಯದ ಅಧ್ಯಕ್ಷ- ರಸಲ್ ರೋಚ್ ಮತ್ತು ಲಯನ್ಸ್ ಕ್ಲಬ್ ಮುಲ್ಕಿ ಅಧ್ಯಕ್ಷ ಪ್ರತಿಭಾ ಹೆಬ್ಬಾರ್, ನಿಕಟ್ ಪೂರ್ವ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಮತ್ತು ಉದಯ ಅಮಿನ್, ಕಥೊಲಿಕ್ ಸಭಾ ಸುರತ್ಕಲ್ ಘಟಕದ ಅಧ್ಯಕ್ಷ ಪೀಟರ್ ಅಲೆಕ್ಸ್ ಡಿಸೋಜಾ, ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ನ ಉಪಾಧ್ಯಕ್ಷ ಡೊನಿ ಸುವಾರಿಸ್ ಕಥೊಲಿಕ್ ಸಭಾ ಸುರತ್ಕಲ್ ವಲಯದ ‘ಆಮ್ಚೊ ಸಂದೇಶ್’ ಪ್ರತಿನಿಧಿ ಡಯಾನಾ ಫೆರ್ನಾಂಡಿಸ್ ಮತ್ತು ಇತರರು ಉಪಸ್ಥಿತರಿದ್ದರು.
