ಗುರುಪುರ ಕುಕ್ಕುದಕಟ್ಟೆಯಲ್ಲಿ ಶ್ರೀ ವೈದ್ಯನಾಥ ಕ್ರಿಕೆಟರ್ಸ್ ಸದಸ್ಯರು ಶ್ರೀ ವೈದ್ಯನಾಥ ಸಮುದಾಯ ಕಲ್ಯಾಣ ಭವನದೆದುರು ಆಯೋಜಿಸಿದ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಮಾಜಿ ತಾಪಂ ಸದಸ್ಯ ಯಶವಂತ ಆಳ್ವ ಧ್ವಜಾರೋಹಣ ಮಾಡಿದರು. ಪುರಂದರ ಮಲ್ಲಿ, ಅಡ್ವಕೇಟ್ ನಿತೀಶ್ ಕೋಟ್ಯಾನ್, ಯಶವಂತ ಕೋಟ್ಯಾನ್, ಜೈರಾಜ್, ಮೋಹನ, ಪದ್ಮಾವತಿ, ಜಿ ಕೆ ನರಸಿಂಹ ಪೂಜಾರಿ, ಸಂದೇಶ್ ಜಿ ಕೆ, ಸಂದೀಪ್ ಜಿ ಕೆ, ಸುಧೀರ್ ಭಂಡಾರಿ, ಸುರೇಶ್ ಪೂಜಾರಿ ಹಾಗೂ ಕ್ರಿಕೆಟರ್ಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

gur-aug-15-i.day(kukkudakatte)-2

ಗುರುಪುರ ಜಂಕ್ಷನ್‍ನಲ್ಲಿ ಸೇವಾ ಬ್ರಿಗೇಡ್ ಗುರುಪುರ ಆಯೋಜಿಸಿದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಓಂ ಪ್ರಕಾಶ್ ಶೆಟ್ಟಿ ಧ್ವಜಾರೋಹಣ ಮಾಡಿದರು. ಉಳಾಯಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ ರಾಜೀವ ಶೆಟ್ಟಿ ಸಲ್ಲಾಜೆ ಸಂದರ್ಭೋಚಿತ ಮಾತನಾಡಿದರು. ಗುರುಪುರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪುರಂದರ ಮಲ್ಲಿ, ಕೃಷ್ಣ ಸಾಲ್ಯಾನ್, ವಿನಯ ಸುವರ್ಣ, ರಮಾನಂದ ಶೆಟ್ಟಿ, ಜಲಜಾ ಮತ್ತಿತರರು ಉಪಸ್ಥಿತರಿದ್ದರು. ಮಧುರಾಜ್ ನಿರೂಪಿಸಿದರು.gur-aug-15-i.day(gurpur junction)-3

 ಸ್ವಾತಂತ್ರ್ಯೋತ್ಸವ ನಿಮಿತ್ತ ಗುರುಪುರ-ಕೈಕಂಬ ಸಂಪರ್ಕ ಕಲ್ಪಿಸುವ ಅಣೆಬಳಿ ಕಾಂಕ್ರೀಟ್ ರಸ್ತೆಯಲ್ಲಿರುವ ಶ್ರೀ ಸತ್ಯ ದೇವತೆ ಮೂಲ ಗರ್ಭಗುಡಿಯ ಇಳಿಜಾರು ಪ್ರದೇಶದಲ್ಲಿ ಜಿ ಪ್ರಶಾಂತ್ ಭಟ್ ಮುಂದಾಳತ್ವದಲ್ಲಿ ಅಭಿಮಾನಿ ಬಳಗ ಗುರುಪುರ ಕಾರ್ಯಕರ್ತರು ಪೊದೆಗಂಟಿ ತೆರವುಗೊಳಿಸಿ, ರಸ್ತೆ ಜಾರದಂತೆ ಸುಣ್ಣ ಹಾಕಿ ಸ್ವಚ್ಛತಾ ಕಾರ್ಯ ನಡೆಸಿದರು.

gur-aug-15-i.day(gurpur satyadevate)-3

ಗುರುಪುರ ಕೈಕಂಬದಲ್ಲಿ ಫ್ರೆಂಡ್ಸ್ ಸರ್ಕಲ್ ಕೈಕಂಬದಲ್ಲಿ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸರ್ಕಲ್‍ನ ಗೌರವಾಧ್ಯಕ್ಷ ಅಬ್ದುಲ್ ಹಮೀದ್ ಶಾಂತಿನಗರ ಧ್ವಜಾರೋಹಣ ಮಾಡಿದರು. ಶಾಫಿ ಮದನಿ ಕರಾಯ ಮಾತನಾಡಿದರು. ವೇದಿಕೆಯಲ್ಲಿ ಅಧ್ಯಕ್ಷ ಇಂತಿಯಾಜ್ ಗುರುಪುರ, ಪ್ರಧಾನ ಕಾರ್ಯದರ್ಶಿ ತನ್ವೀರ್ ಗುರುಪುರ, ಅಬ್ದುಲ್ ಮಜೀದ್ ಸೂರಲ್ಪಾಡಿ, ಬದ್ರುದ್ದಿನ್ ಅಝರ್, ಜಮಾಲ್ ದಾರಿಮಿ ಗುರುಪುರ ಮತ್ತಿತರರು ಉಪಸ್ಥಿತರಿದ್ದರು.

gur-aug-15-i.day(kaikamba junction)-1 (1)

By Suddi9

Leave a Reply

Your email address will not be published. Required fields are marked *