ಗುರುಪುರ : ಗುರುಪುರ ಸರ್ಕಾರಿ ಹೈಸ್ಕೂಲ್‍ನ 8, 9 ಮತ್ತು 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ 2020-12ನೇ ಶೈಕ್ಷಣಿಕ ವರ್ಷಕ್ಕೆ ಸರ್ಕಾರ ಒದಗಿಸಿರುವ ಪಠ್ಯಪುಸ್ತಕ ವಿತರಿಸಲಾಯಿತು.ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಿದ ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಸುಮಾರು ಮೂರು ತಿಂಗಳು ಶಿಕ್ಷಕರ ಸಂಪರ್ಕವಿಲ್ಲದಿದ್ದರೂ ವಿದ್ಯಾರ್ಥಿಗಳು ಈ ಶಾಲೆಗೆ ಉತ್ತಮ ಫಲಿತಾಂಶ(87.23%) ತಂದುಕೊಟ್ಟಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಸಚಿನ್ ಅಡಪ, ಗುರುಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ್ ಕಾವ ಉಪಸ್ಥಿತರಿದ್ದರು.ಸ್ವಾಗತಿಸಿ, ಪ್ರಸ್ತಾವಿಸಿದ ಶಾಲಾ ಮುಖ್ಯೋಪಾಧ್ಯಾಯಿನಿ ರೂಪಾ ಡಿ ಎನ್ ಶಾಲಾ ಮಕ್ಕಳ ಪ್ರಗತಿ ಹಾಗೂ ಶಾಲೆಯ ಹೊಸ ಕಟ್ಟಡದ ಬಗ್ಗೆ ಅತೀವ ಕಾಳಜಿ ವಹಿಸಿದ ಜಿಪಂ, ತಾಪಂ, ಗ್ರಾಪಂ ಜನಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರನ್ನು ಸ್ಮರಿಸಿದರು.
