ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ 5 ನೇ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ ಹಾಗೂ ಕೊರೋನಾ ಮಹಾಮಾರಿಯ ನಿಗ್ರಹಕ್ಕಾಗಿ 108 ದಿನಗಳ ಮನೆ ಮನೆ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು.
ಆ. 5ರಂದು ಬುಧವಾರ ಸೂರ್ಲ ಗೋಪಾಲ ಪೂಜಾರಿ ಯವರ ಮನೆಯಲ್ಲಿ 100ನೇ ದಿನದ ಭಜನೆ ಸೇವೆಯನ್ನು ಮಾಡಲಾಯಿತು. ಓಂಕಾರ ಭಜನಾ ಮಂಡಳಿಯ ತಂಡದಲ್ಲಿ ಸುಮನ್ ರಾಜ್ ಸೂರ್ಲ ಮುರಳಿ ಪೊಳಲಿ, ಪ್ರೇಮನಾಥ್ ಪೊಳಲಿ, ವೆಂಕಟೇಶ್ ಮಂಗಳೂರು,ಹರೀಶ್ ಮಣಿಕಂಠಪುರ, ಲಿಖಿತ್ ಮಣಿಕಂಠಪುರ ಮತ್ತಿತರರು ಭಜನಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

