ಶ್ರೀನಿವಾಸಪುರ: ಪುರಸಭಾ ಕಛೇರಿಯಲ್ಲಿ  36 ವರ್ಷಗಳಿಂದ ಸೇವೆ ಸಲ್ಲಿಸಿ,  ವಯೋನಿವೃತ್ತಿ ಹೊಂದಿದ ಶ್ರೀಮತಿ ಎಂ.ವನಜಾಕ್ಷಿರವರನ್ನು ಪುರಸಭಾ ಮುಖ್ಯಾಧಿಕಾರಿ ಶ್ರೀ ವಿ.ಮೋಹನ್ ಕುಮಾರ್  ರವರ ನೇತೃತ್ವದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.IMG-20200803-WA0219

ಬೀಳ್ಕೊಡುಗೆ ಸಮಾರಂಭದಲ್ಲಿ  ಪುರಸಭಾ ಸದಸ್ಯ ಶ್ರೀ ಅನೀಸ್ ಅಹ್ಮದ್, ಪರಿಸರ ಅಭಿಯಂತರರಾದ ಶ್ರೀ ಎಂ.ಶೇಖರ್, ಸಮುದಾಯ ಸಂಘಟನಾಧಿಕಾರಿ ಶ್ರೀಮತಿ ಕೆ.ಎನ್.ರಾಜೇಶ್ವರಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀ ಕೆ.ಜೆ.ರಮೇಶ್ ಸೇರಿದಂತೆ ಪುರಸಭಾ ಸಿಬ್ಬಂದಿ ವರ್ಗದವರು ಹಾಜರಿದ್ದು, 36 ವರ್ಷಗಳ ಕಾಲ ಪ್ರಾಮಾಣಿಕವಾಗಿ  ಶ್ರೀಮತಿ ಎಂ.ವನಜಾಕ್ಷಿರವರು ಸೇವೆ ಸಲ್ಲಿಸಿರುವುದನ್ನು ಶ್ಲಾಘಿಸಿದರು.

By Suddi9

Leave a Reply

Your email address will not be published. Required fields are marked *