ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಆಯೋಜನೆಯಲ್ಲಿ ಸಾಹಿತಿ ಹರಿಕೃಷ್ಣ ರಾವ್ ಸಗ್ರಿ ಅವರು ಸಂಗ್ರಹಿಸಿ ಪ್ರಕಾಶನ ಮಾಡಿರುವ “ಶ್ರೀಶಂಕರ ಭಗವತ್ಪಾದಾಚಾರ್ಯ ಸಹಸ್ರನಾಮ ಸ್ತೋತ್ರಂ” ಸಂಸ್ಕ್ರತ ಗ್ರಂಥದ ಬಿಡುಗಡೆ ಕಾರ್ಯಕ್ರಮವು ನಾಗರಿಕ ಸಮಿತಿಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಕೋಟಕ್ ಮಹೇಂದ್ರ ಬ್ಯಾಂಕಿನ ವ್ಯವಸ್ಥಾಪಕ ಎಮ್. ದೀಪಕ್ ಕುಮಾರ್ ಅವರು ಗ್ರಂಥದ ಬಿಡುಗಡೆ ಮಾಡಿದರು. ಶ್ರೀಶಂಕರಾಚಾರ್ಯರ ತತ್ವ ಸಿದ್ಧಾಂತಗಳು, ಆಧ್ಯಾತ್ಮ ಚಿಂತನೆಗಳು ಸಮಾಜದ ಮನೆ ಮನಗಳಲ್ಲಿ ಪಸರಿಸುವಂತೆ ಮಾಡಲಿ ಎಂದು ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಮುರಳಿಧರ ಬಲ್ಲಾಳ್ ಕರ್ನಪಾಡಿ ಅವರು ಶುಭಹಾರೈಸಿದರು. ಸಾಹಿತಿ ಹರಿಕೃಷ್ಣರಾವ್ ಸಗ್ರಿ ಅವರು ಗ್ರಂಥ ಪರಿಚಯ ಮಾಡಿದರು. ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು, ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *