ಬಂಟ್ವಾಳ:ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆ ರೋಟರಿ ಕ್ಲಬ್ ಸಾಮಾಜಿಕ ಚಟುವಟಿಕೆ ಜೊತೆಗೆ ಕೖಷಿ ಮತ್ತು ತೋಟಗಾರಿಕೆಗೆ ಕೂಡಾ ಪ್ರೋತ್ಸಾಹ ನೀಡುತ್ತಿದೆ ಎಂದು ರೋಟರಿ ಸಹಾಯಕ ಗವನ೯ರ್ ಯತಿಕುಮಾರ್ ಸ್ವಾಮಿ ಗೌಡ ಹೇಳಿದ್ದಾರೆ.
ಇಲ್ಲಿನ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಅಡಿಕೆ ತೋಟದಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಭಾನುವಾರ ಏಪ೯ಡಿಸಿದ್ದ ‘ತೋಟಗಾರಿಕೆಯಲ್ಲಿ ಯಂತ್ರೋಪಕರಣ ಬಳಕೆ’ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾಯ೯ಕ್ರಮದಲ್ಲಿ ಅವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಗುರು ಕಮ್ಯೂನಿಕೇಶನ್ಸ್ ಸಂಸ್ಥೆ ಮುಖ್ಯಸ್ಥ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ಮಾಹಿತಿ ನೀಡಿದರು.
ಲೊರೆಟ್ಟೋಹಿ ರೋಟರಿ ಕ್ಲಬ್ ಅಧ್ಯಕ್ಷ ಅಂತೋನಿ ಸಿಕ್ವೇರ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದರು.ಆರಂಬೋಡಿ ಗ್ರಾ.ಪಂ.ಅಧ್ಯಕ್ಷ ಪ್ರಭಾಕರ ಹುಲಿಮೇರು, ರೋಟರಿ ಕ್ಲಬ್ ನಿಕಟಪೂವ೯ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಕಾಯ೯ದಶಿ೯ ಪ್ರೀತಂ ರಾಡ್ರಿಗಸ್, ಪ್ರಗತಿಪರ ಕೖಷಿಕ ರಮೇಶ್ ಪೂಜಾರಿ ಮಂಜಿಲ, ಉಪನ್ಯಾಸಕ ಡಾ.ಯೋಗೀಶ ಕೈರೋಡಿ, ಡಾ.ಸುದೀಪ್ ಕುಮಾರ್ ಜೈನ್ ಮತ್ತಿತರರು ಶುಭ ಹಾರೈಸಿದರು.ಇದೇ ವೇಳೆ ನೆಲದಿಂದಲೇ ಅಡಿಕೆ ಮರಗಳಿಗೆ ಔಷಧಿ ವಿತರಣೆ, ವಿವಿಧ ತಳಿ ಗಿಡ ವಿತರಣೆ ಕಾಯ೯ಕ್ರಮ ನಡೆಯಿತು.
