ಬಂಟ್ವಾಳ: ರವಿವಾರ ಸಂಜೆ  ತಾಲೂಕಿನ ನಡುಮೊಗರು ಸರಕಾರಿ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ಕಟ್ಟಡ ಸಂಪೂರ್ಣ ಹಾನಿಗೊಂಡಿರುವ ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಸೋಮವಾರ ಭೇಟಿ ನೀಡಿ ಪರಿಶೀಲಿಸಿ, ಶಾಲೆಗೆ ನೂತನ ಕಟ್ಟಡ ನಿರ್ಮಿಸುವುದಾಗಿ ಭರವಸೆ ನೀಡಿದರು.IMG-20200720-WA0052

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರ,ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕಂದಾಯ ನೀರೀಕ್ಷಕರಾದ ನವೀನ್,ಪಂಚಾಯತ್ ಅಭಿವೃದ್ಧಿ ‍ಅಧಿಕಾರಿ ವಸಂತಿ, ಗ್ರಾಮಕರಣಿಕರಾದ ಚನ್ನಬಸವ,ಸ್ಥಳೀಯ ಪ್ರಮುಖರಾದ ಸುರೇಶ್ ಮೈರಾ,ಬೊಳ್ಳುಕಲ್ಲು ನಾರಾಯಣಪೂಜಾರಿ,ಚಿದಾನಂದ ರೈ,ಶಶಿಕಾಂತ ಶೆಟ್ಟಿ,ಧನಂಜಯ ಶೆಟ್ಟಿ,ಉಮೇಶ್ ಪುಣ್ಕೆದಡಿ,ದಯಾನಂದ ಮುಂಡ್ರಬೈಲು,ಶಿವಾನಂದ,ಶಾಂತಪ್ಪ ಪೂಜಾರಿ,ಕೇಶವ.ಎಮ್, ಪುರುಷೋತ್ತಮ ಪೂಜಾರಿ ಮಜಲು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.IMG-20200720-WA0043

ಶಾಲೆಯ ಕುಸಿದ ಕಟ್ಟಡವು ಹಳೆಯದಾಗಿದ್ದು, ಕಳೆದ ಬಾರಿ ಅದರ ಮೇಲ್ಛಾವಣಿ ದುರಸ್ತಿ ಮಾಡಲಾಗಿತ್ತು. ಪ್ರಸ್ತುತ ಕಟ್ಟಡಕ್ಕೆ ಪೂರ್ತಿ ಹಾನಿಯಾಗಿದ್ದು,  ಪ್ರಸ್ತುತ ಶಾಲೆಗೆ ರಜಾ ದಿನವಾಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

By suddi9

Leave a Reply

Your email address will not be published. Required fields are marked *