ಶ್ರೀನಿವಾಸಪುರ: ಹಳ್ಳಿಗಾಡು ಪ್ರದೇಶದಲ್ಲಿ ಬಡ ರೈತರ ಮಕ್ಕಳು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಈ ವಿದ್ಯಾರ್ಥಿಗಳ ಸಾಧನೆ ಹೆತ್ತ ತಂದೆ ತಾಯಿಗಳಿಗೆ ವಿದ್ಯಾ ಸಂಸ್ಥೆಗೆ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ಶಿವಮೂರ್ತಿ ತಿಳಿಸಿದರು.
ಪಟ್ಟಣದ ಗಂಗೋತ್ರಿ ಪಿ.ಯು. ಕಾಲೀಜಿನಲ್ಲಿ ಪಿಯುಸಿ ಫಲಿತಾಂಶದಲ್ಲಿ ತಾಲ್ಲೂಕಿನಲ್ಲೆ ಅತಿ ಹೆಚ್ಚಿನ ಅಂಕಗಳನ್ನು ಪಡೆದ ವಿಜ್ನಾನ ವಿಭಾಗದ ಗಿರೀಶ್ ಕೆ.ಎಸ್. ಮತ್ತು ವಾಣಿಜ್ಯ ವಿಭಾಗದ ಭಾನುತೇಜ್ ಈ ಇಬ್ಬರನ್ನು ರೋಟರಿ ಶ್ರೀನಿವಾಸಪುರ ಸೆಂಟ್ರಲ್ ವತಿಯಿಂದ ಅಭಿನಂದಿಸಿ, ಸನ್ಮಾನ ಮಾಡಿ ಮಾತನಾಡಿದ ಎಸ್. ಶಿವಮೂರ್ತಿ, ತಾಲ್ಲೂಕು ಗಡಿಭಾಗದಲ್ಲಿದ್ದು, ಮಾವು ಬೆಳೆಯಲ್ಲಿ ಜಗತ್ ಪ್ರಸಿದ್ದವಾದ ಈ ಪ್ರದೇಶ ಸಾಮಾನ್ಯ ಕೂಲಿ ಕಾರ್ಮಿಕರ, ಬಡ ರೈತರ ಮಕ್ಕಳಾದ ಈವಿದ್ಯಾರ್ಥಿಗಳು ಶ್ರದ್ದೆ ಏಕಾಗ್ರತೆಇಂದ ಸರಸ್ವತಿ ದೇವಿಯ ಆಶೀರ್ವಾದದಿಂದ ಶ್ರಮಪಟ್ಟು ಓದಿ ಭೋದಕರ ಸಹಕಾರದಿಂದ ತಂದೆ-ತಾಯಿಗಳ ಸಹಕಾರದಿಂದ ಉನ್ನತ ದರ್ಜೆಯಲ್ಲಿ ತೇರ್ಗಡೆಹೊಂದಿರುವುದು ಅಭಿನಂದನಾರ್ಹವಾಗಿದೆ ಎಂದರು. ಇದೆ ಸಮಯದಲ್ಲಿ ರೋಟರಿ ಸಂಸ್ಥೆಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀನಿವಾಸಪುರ ರೋಟರಿ ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾಂಚಿ ಎಸ್.ಎನ್. ಮಂಜುನಾಥರೆಡ್ಡಿ, ನಿರ್ದೇಶಕರಾದ ಬೈರೇಗೌಡ, ಬಿ. ಆನಂದಕುಮಾರ್, ಗಂಗೋತ್ರಿ ಕಾಲೇಜಿನ ಅಧ್ಯಕ್ಷರಾದ ಮುರಳಿನಾಥ್, ಕಾರ್ಯದರ್ಶಿ ಅಮರನಾಥ್, ಪ್ರಾಚಾರ್ಯರು, ಪೋಷಕರು ಹಾಜರಿದ್ದರು.
