ಬಂಟ್ವಾಳ, ತೆಂಕಬೆಳ್ಳೂರು ಗ್ರಾಮದ ಪಡೀಲುಬೈಲು ನಿವಾಸಿ ಲೋಕನಾಥ್ ನಾಯಕ್(೫೧) ಅವರು ಮನೆಗೆ ದಿನಸಿ ಸಾಮಾನು ತರಲೆಂದು ಹೋದವರು ನೀರು ತುಂಬಿದ್ದ ತೋಡಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜು. ೮ರಂದು ನಡೆದಿದೆ.ದಿನಸಿ ತರಲು ಹೋದವರು ಮರಳಿ ಬಾರದೇ ಇದ್ದು, ಹುಡುಕಿದಾಗ ತೋಡಿನಲ್ಲಿ ಬಳಿ ಚಪ್ಪಲಿ ಕಂಡು ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ವಿಪರೀತ ಮಳೆಯಿಂದ ನೀರು ಹೆಚ್ಚಿದ್ದು, ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
—
