ತೊಕ್ಕೊಟ್ಟು: ಕಾಫಿಕಾಡಿನ ಶ್ರೀ ಭಗವತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ  ಶ್ರೀ ಸೋಮೇಶ್ವರೀ ಸೌಹಾರ್ದ ಸಹಕಾರಿ ನಿಯಮಿತವು  ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ದ್ವಾರಕ ಕಾಂಪ್ಲೆಕ್ಸ್ ನ ಎರಡನೇ ಮಹಡಿಗೆ ಭಾನುವಾರ ಸ್ಥಳಾಂತರಗೊಂಡಿದೆ. ಕಟ್ಡಡದ ಮಾಲಕಿ ಶ್ರೀಮತಿ ವೇದಾವತಿ ಅವರು ಉದ್ಘಾಟಿಸಿ ಶುಭಹಾರೈಸಿದರು.IMG-20200614-WA0018

ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯಕ್ ಅವರು ದೀಪಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ, ಗ್ರಾಹಕರು ಪಡೆದ ಸಾಲವನ್ನು ನಿಗದಿತ ಸಮಯಲ್ಲಿ ಮರುಪಾವತಿಸಿ ನಿಯಮಿತದ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.ನಿಯಮಿತದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ್,ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಅತಿಥಿಯಾಗಿದ್ದರು.

ನಿಯಮಿತದ ಉಪಾಧ್ಯಕ್ಷ ಧರ್ಮಪಾಲ್ ನಾಯಕ್ ಪಂಪ್ ವೆಲ್,ನಿರ್ದೇಶಕರಾದ ಎಂ. ರಂಜನ್ ನಾಯಕ್ , ಮಿಥಿಲೇಶ್ ಮಣ್ಣಗುಡ್ಡೆ,ಲಕ್ಷ್ಮಣ್ ನಾಯಕ್ ಸಂತೋಷ್ ನಗರ,ಮುರಳೀಧರ ನಾಯಕ್,ಶ್ರೀಮತಿ ಆಶಾ ನಾಯಕ್ ಗೋರಿಗುಡ್ಡೆ,ಶ್ರೀಮತಿ ಹೇಮ ಮಂಕಿಸ್ಟ್ಯಾಂಡ್ ,ಗಟ್ಟಿ ಸಮಾಜದ ಅಧ್ಯಕ್ಷ  ಪವಿತ್ರಕುಮಾರ್ ಗಟ್ಟಿ  ಮೊದಲಾದವರಿದ್ದರು. ನಿರ್ದೇಶಕ ವೆಂಕಟೇಶ್ ಬಂಟ್ವಾಳ ಸ್ವಾಗತಿಸಿದರು.ನಿಯಮಿತದ ಕಾರ್ಯದರ್ಶಿ ಶ್ರೀಮತಿ ಲಾವಣ್ಯ ವಂದಿಸಿದರು.ಸಿಬ್ಬಂದಿಗಳಾದ ಶ್ರೀಮತಿ ಪವಿತ್ರ,ದಿವಾಕರ್ ಆಚಾರ್ಯ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *