ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸೆಲೂನ್, ಬಾರ್ಬರ್ ಶಾಪ್‍ಗಳಿಗೆ ಇಲ್ಲಿಯವರೆಗೆ ಇದ್ದ ಮಂಗಳವಾರದ ರಜೆಯ ಬದಲು ಭಾನುವಾರ ರಜೆ ಎಂದು ನಿರ್ಧಾರ ಮಾಡಲಾಗಿದೆ ಎಂದು ದ ಕ. ಜಿಲ್ಲಾ ಸವಿತಾ ಸಮಾಜ ತಿಳಿಸಿದೆ.

92a12e08-114c-45a1-b8ed-2b7986e1c350
ಇಲ್ಲಿಯವರೆಗೆ ಇದ್ದ ಲಾಕ್‍ಡೌನ್‍ನಲ್ಲಿ ಸೆಲೂನ್ ಸೇರಿದಂತೆ ಬಾರ್ಬರ್ ಶಾಪ್‍ಗಳು ಕೂಡ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಭಾನುವಾರ ಲಾಕ್ ಡೌನ್ ಇಲ್ಲದೇ ಇದ್ದರೂ ಕೂಡ ಶೇ.80ರಷ್ಟು ಸೆಲೂನ್, ಬಾರ್ಬರ್ ಶಾಪ್ ಬಂದ್ ಆಗಿತ್ತು. ಇನ್ನು ಮುಂದೆ ಮಂಗಳವಾರದ ಬದಲು ಭಾನುವಾರ ರಜೆ ಎಂದು ನಿರ್ಧಾರ ಮಾಡಲಾಗಿದೆ ಎಂದು ಮಂಗಳೂರು ದ.ಕ. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಹಾಗೂ ಪ್ರಧಾನ ಕಾರ್ಯದರ್ಶಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *