ಶ್ರೀನಿವಾಸಪುರ: ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶದಂತೆ ಮೇ.20 ರಿಂದ 22ರ ವರೆಗೆ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಹೊಸ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುವುದು ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶ ಎಚ್‌.ಆರ್‌.ದೇವರಾಜು ತಿಳಿಸಿದ್ದಾರೆ.1......

ಹಾಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ಮಧ್ಯಂತರ ಅರ್ಜಿಗಳನ್ನು ಸಲ್ಲಿಸಲು ಪ್ರಾಯೋಗಿಕವಾಗಿ ಪಟ್ಟಣದ ಸಿವಿಲ್‌ ನ್ಯಾಯಾಲಯದಲ್ಲಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರಕರಣಗಳನ್ನು ದಾಖಲಿಸುವ ಮುನ್ನ ಕಕ್ಷಿದಾರರು ಮತ್ತು ವಕೀಲರು ಜಿಲ್ಲಾ ನ್ಯಾಯಾಲಯದ ಇ ಮೇಲ್‌ bdj.kolar@hek.gmail.com  ನಲ್ಲಿ ಮನವಿ ಸಲ್ಲಿಸಿ, ಮುಂಚಿತವಾಗಿ ಪಾಸ್‌ ಪಡೆದು ದಾಖಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವಾಗ ಅಂತರ ಪಾಲಿಸಬೇಕು. ಮಾಸ್ಕ್‌ ಧರಿಸಿರಬೇಕು ಎಂದು ತಿಳಿಸಲಾಗಿದೆ.

By suddi9

Leave a Reply

Your email address will not be published. Required fields are marked *