ಶ್ರೀನಿವಾಸಪುರ : ಕೊರೊನಾದಿಂದ ಸಂಕಷ್ಟದಲ್ಲಿರುವ ಅಲ್ಪ ಸಂಖ್ಯಾತರಿಗೆ ರಂಜಾನ್ ಆಚರಣೆ ಮಾಡಲು ಸಮಾಜ ಸೇವಕ ಹಾಗೂನಿರ್ಣಯ ವಾರಪತ್ರಿಕೆ ಸಂಪಾದಕರು ಎಸ್. ನಾರಾಯಣಸ್ವಾಮಿ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು .

ಕಿಟ್ ವಿತರಿಸಿ ಮಾತನಾಡಿದ ಅವರು , ಕೊರೊನಾ ಭೀತಿ ಜನರಲ್ಲಿ ಆವರಿಸಿಕೊಂಡಿದೆ . ಕೆಲವರು ಜೀವನ ಮಾಡಲು ಕೆಲಸ ಕಾರ್ಯಗಳಿಲ್ಲದೇ ಸಂಕಷ್ಟದಲ್ಲಿದ್ದಾರೆ . ಹಾಗಾಗಿ ಅವರಿಗೆ ಒಂದಿಷ್ಟು ಸಹಾಯ ಮಾಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು . ಈ ಸಂದರ್ಭದಲ್ಲಿ ಅನೀಸ್ ಅಹಮ್ಮದ್, ಅಮೀರ್‌ಖಾನ್ , ನಜೀರ್ ಅಹದ್ ಇದರು .
