ಕೋಲಾರ: ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ರೇಷ್ಮೆ ಗೂಡು ಹರಾಜು ಹಾಕಿ ತೂಕ ಆದ ನಂತರ ಕ್ಯಾಷಿಯರ್ಗಳು ಗಂಟೆಗಟ್ಟಲೆ ಹಣ ನೀಡದೆ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ರೈತ ಸೇನೆಯ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ರೀಲರ್ಗಳು ಗೂಡು ಹರಾಜು ಕರೆಯಲು ಮುಂಗಡ ಹಣ ಪಾವತಿಸಿ ಹರಾಜ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಆದರೆ ಇಲ್ಲಿನ ಕ್ಯಾಷಿಯರ್ಗಳ ರೀಲರ್ಗಳ ಜೊತೆ ಶಾಮೀಲಾಗಿ 1000 ರೂ ಹಣ ನೀಡಿದ ರೀಲರ್ಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ ಎಂದು ದೂರಿದರು. ಇಡೀ ದೇಶದಲ್ಲಿ ಕೊರೋನಾ ಖಾಯಿಲೆ ಆವರಿಸಿದ್ದು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಸೂಕ್ತ ಬೆಲೆ ಇಲ್ಲದೆ ಒದ್ದಾಡುತ್ತಿದ್ದಾರೆ. ಇನ್ನು ರೈತರು ಬೆಳೆದ ರೇಷ್ಮೆ ಗೂಡಿಗೆ ದಿಡೀರನೆ ಬೆಲೆ ಕುಸಿತದಿಂದ ಕಂಗಾಲಾಗಿದ್ದಾನೆ. ಬೆಳೆದ ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತಂದರೆ ಗೂಡು ಹರಾಜು ಹಾಕಿ ತೂಕ ಹಾಕಿದ ನಂತರವೂ ಸಮಯಕ್ಕೆ ಸರಿಯಾಗಿ ಹಣ ನೀಡದೆ ಕ್ಯಾಷಿಯರ್ಗಳು ಗಂಟೆ ಗಟ್ಟಲೆ ಸತಾಯಿಸುತ್ತಿದ್ದಾರೆ.
ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದ ಹಾಗೆ ವರ್ತಿಸುತ್ತಾ ರೈತರನ್ನು ವಂಚಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೇರೆ ಸಮಯದಲ್ಲಿ ಗೈರು ಹಾಜರಾಗುತ್ತಿದ್ದ ರೇಷ್ಮೆ ಇಲಾಖೆಯ ಅಧಿಕಾರಿಗಳು ಇಂದು ಮಾರುಕಟ್ಟೆಗೆ ಲೋಕಸಭಾ ಸದಸ್ಯರು ಆಗಮಿಸುತ್ತಾರೆ ಎಂಬ ಮಾಹಿತಿಯನ್ನು ಪಡೆದು ಕೆಲಸಕ್ಕೆ ಹಾಜರಾಗಿರುತ್ತಾರೆ. ಆದ್ದರಿಂದ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ರೇಷ್ಮೆ ಇಲಾಖೆಯ ಅಧಿಕಾರಿಗಳ ವಿರುದ್ಧ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕೊರೋನಾ ಲಾಕ್ಡೌನ್ ಮುಗಿಯುವವರೆಗೆ ಹೊರ ರಾಜ್ಯಗಳಿಂದ ಬರುತ್ತಿರುವ ರೇಷ್ಮೆ ಗೂಡನ್ನು ತಡೆ ಹಿಡಿಯಬೇಕೆಂದು ಒತ್ತಾಯಿಸಿದ ಅವರು ಈಗಾಗಲೇ ರೇಷ್ಮೆ ಬೆಲೆ ಕುಸಿದಿದ್ದು, ಹೊರ ರಾಜ್ಯಗಳಿಂದ ಬರುವ ರೇಷ್ಮೆಯಿಂದ ಇಲ್ಲಿನ ರೇಷ್ಮೆ ಬೆಳೆಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಕೊರೋನಾ ಸಹ ಹರಡುವ ಭೀತಿಯಿದೆ. ಹೊರ ರಾಜ್ಯಗಳಿಂದ ಬರುವ ರೇಷ್ಮೆ ಗೂಡನ್ನು ತಡೆದು ಇಲ್ಲಿನ ರೇಷ್ಮೆಗೆ ಅನಕೂಲ ಕಲ್ಪಿಸಿಕೊಡಬೇಕು. ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದ್ದು, ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಜನತೆ ಇಂದು ಪರದಾಡುವಂತಾಗಿದೆ. ಸರ್ಕಾರ ಸೂಕ್ತ ಕ್ರಮ ವಹಿಸಿ ಜನರ ಕೈ ಹಿಡಿಯಬೇಕೆಂದು ಕರ್ನಾಟಕ ರೈತ ಸೇನೆಯ ಕೆ.ಬಿ ಮುನಿವೆಂಕಟಪ್ಪ, ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಶ್ರೀಧರ್, ಮಂಜುನಾಥ್, ನಾಗೇಶ್, ನಾಗರಾಜ್, ಆನಂದ್ಗೌಡ ಒತ್ತಾಯಿಸಿದ್ದಾರೆ.
ಗಣೇಶ್ಗೌಡ 9448209297
