ಕೊಂಪದವು – ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಅರ್ಜುನಕೋಡಿ ಅಂಗನವಾಡಿ ಕೇಂದ್ರದ ಬಳಿ ತ್ರಿನೇತ್ರ ಮಾತ್ರ ಮಂಡಳಿಯ ಉದ್ಘ್ಜಾಟನೆಯನ್ನು ಎಡಪದವು ಸ್ವಾಮಿ ವಿವೇಕಾನಂದ ಪದವಿ ವೂರ್ವ ಕಾಲೇಜಿನ ಅದ್ಯಾಪಕರಾದ ವಾಸು .ಕೆ.ಉದ್ಘಾಟಿಸಿದರು .
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಶಾಲಿನಿ ಹಿರಿಯ ಆರೋಗ್ಯ ಸಹಾಯಕಿ ವಿಶ್ವ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು . ಅಂಗನವಾಡಿ ಕಾರ್ಯಕರ್ತೆ ನಯನಾಕ್ಷಿ ಹಾಗೂ ತ್ರಿನೇತ್ರ ಮಾತ್ರ ಮಂಡಳಿ ಹಾಗೂ ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ಸದಸ್ಯರು ಉಪಸ್ತಿತರಿದ್ದರು . ಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ , ಶ್ರೀಮತಿ ಕಲಾವತಿ ಇವರು ವಂದಿಸಿದರು.

