ಕೈಕಂಬ: ಶ್ರೀ ಧೂಮಾವತಿ ಕನಲ್ಲಾಯ ಯೂತ್ ಕ್ಲಬ್(ರಿ)ಕುಳವೂರು ,ಕುಪ್ಪೆಪದವು ಇದರ 8 ನೇ ವರ್ಷದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮ ವು ಗುರುವಾರ ತೆರೆಜಾಲು ನಲ್ಲಿ ಜರಗಿತು.ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ,ಗ್ರಾಮೀಣ ಪ್ರದೇಶದಲ್ಲಿ ಸಕ್ರೀಯ ವಾಗಿ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ,ಕಲಾವಿದರನ್ನು ಗುರುತಿಸಿ ಗೌರವಿಸುವ ಯೂತ್ ಕ್ಲಬ್ ನ ಕಾರ್ಯವನ್ನು ಶ್ಲಾಘಿಸಿದರು.ನಾಟಕ ಕಲಾವಿದ ದಿನೇಶ್ ಅತ್ತಾವರ್ ಅವರನ್ನು ಶಾಲು ಹೊಡಿಸಿ ಫಲಪುಷ್ಪ ನೀಡಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು.20200229_171306
ಕುಳವೂರು ಗುಟ್ಟು ಸದಾನಂದ ಶೆಟ್ಟಿ,ಮುತ್ತೂರು ಗ್ರಾಮಪಂಚಾಯತ್ ಸದಸ್ಯರಾದ ಸತೀಶ್ ಪೂಜಾರಿ ಬಲ್ಲಾಜೆ,ಪ್ರವೀಣ್ ಆಳ್ವ ಗುಂಡ್ಯ,ಶರತ್ ಕುಮಾರ್ ಶೆಟ್ಟಿ ಕಡೆಗುಂಡ್ಯ,ಯೂತ್ ಕ್ಲಬ್ ನ ಅಧ್ಯಕ್ಷ ಸಂದೀಪ್ ಆಳ್ವ ಕಂಗಿನಡಿ,ವಿಜಯ ಶೆಟ್ಟಿ,ಚಿತ್ತರಂಜನ್,ಅಮಿತ್,ಲೋಕೇಶ್ ಮತ್ತು ಯೂತ್ ಕ್ಲಬ್ ನ ಪದಾಧಿಕಾರಿಗಳು,ಸದಸ್ಯರು ಹಾಜರಿದ್ದರು.ವಿಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಲ|ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ,ಲಕುಮಿ ತಂಡದ ಕಲಾವಿದರಿಂದ ಗುಟ್ಟು ಗೊತ್ತಾoಡ್ ಎಂಬ ನಾಟಕ ಪ್ರದರ್ಶನ ನಡೆಯಿತು.

By Suddi9

Leave a Reply

Your email address will not be published. Required fields are marked *