ಕೈಕಂಬ::ಒಡ್ಡೂರು ಫಾರ್ಮ್ ಹೌಸ್ ನಲ್ಲಿ ನೂತನವಾಗಿ ನಿರ್ಮಿಸಲಾದ ಧರ್ಮಚಾವಡಿಯಲ್ಲಿ ಧರ್ಮದೈವ ಕೊಡಮಣಿತ್ತಾಯ ದೈವದ ಪ್ರತಿಷ್ಠೆ ಶುಕ್ರವಾರ ಬೆಳಿಗ್ಗೆ ನಡೆಯಿತು.
ಬೆಳಿಗ್ಗೆ ಋತ್ವಿಜರಿಂದ ಸ್ವಸ್ತಿ ವಾಚನ,ಅರಣೀಮಥನಪೂರ್ವಕ ಅಗ್ನಿ ಜನನ,ನವಾಕ್ಷರೀ ಹೋಮ ನಡೆದು ,ಬೆಳಗ್ಗಿನ 8.04 ರ ಮೀನಾ ಲಗ್ನ ಸುಮೂರ್ತದಲ್ಲಿ ಧರ್ಮಚಾವಡಿಯಲ್ಲಿ ದೈವದ ಪ್ರತಿಷ್ಠೆ ನಡೆಯಿತು.ನಂತರ 108ಕಲಶಾಭಿಷೇಕ,ಪ್ರಧಾನ ಹೋಮ,ಸಾನಿಧ್ಯ ಕಲಶಾಭಿಷೇಕ,ಪರ್ವಸೇವೆ,ದರ್ಶನ ಮುಂತಾದ ವೈದಿಕ ವಿಧಿವಿಧಾನಗಳು ಜರಗಿದವು,
ಜಿಲ್ಲೆಯ ವಿವಿಧ ಭಜನಾ ತಂಡಗಳಿಂದ ಅಹೋರಾತ್ರಿ ನಡೆದ ಭಜನಾ ಕಾರ್ಯಕ್ರಮವನ್ನು ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಉದ್ಘಾಟಿಸಿದರು,ಶ್ರೀಮತಿ ಉಷಾ.ಆರ್.ನಾಯ್ಕ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು,ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

