ಕೈಕಂಬ:ಹೊಸ ದಿಗಂತ ನೂತನ ಕಚೇರಿಯ ಉದ್ಘಾಟನ ಸಮಾರಂಭವು ಫೆ.27 ಗುರುವಾರ 4ಗಂಟೆಗೆ ನಡೆಯಲಿದೆ. ಉಡುಪಿ ಪೇಜಾವರ ಮಠದ ಶ್ರಿಶ್ರೀಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಅಧ್ಯಕ್ಷತೆಯನ್ನು ಜ್ಞಾನಭಾರತಿ ಪ್ರಕಾಶನ ಅಧ್ಯಕ್ಷ ಕಜಂಪಾಡಿ ಸುಬ್ರಹ್ಮಣ್ಯ ಭಟ್, ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಿ.ಆರ್. ಮುಕುಂದಜಿ, ಜ್ಞಾನಭಾರತಿ ಪ್ರಕಾಶನ ಲಿಮಿಟೆಡ್ ನಿರ್ದೇಶಕ ದಯಾನಂದ ಪೈ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಯೋಗೀಶ್ ಬಿ.ಆಚಾರ್ಯ ಉಪಸ್ಥಿತರುವರು.
