ನಾರಳ ಸೀತಾರಾಮ ಭಜನಾ ಮಂದಿರದ ಭಜನಾ ಮಂಗಳೋತ್ಸವ ಸಂಪನ್ನ ,ಧಾರ್ಮಿಕ ಸಭೆ.
ಕುಪ್ಪೆಪದವು: ಭಾರತೀಯ ಸಂಸ್ಕ್ರತಿ ಜಗತ್ತಿನ ಶ್ರೇಷ್ಠ ಸಂಸ್ಕ್ರತಿಯಾಗಿದೆ ಆದುದರಿಂದ ಸಂಬಂಧ ಗಳು ಭದ್ರವಾಗಿವೆ ಎಂದು ಕಟೀಲು ಕ್ಷೇತ್ರದ ಪ್ರದಾನ ಅರ್ಚಕರಾದ ಕಮಲಾದೇವಿ ಪ್ರಸಾದ ಅಸ್ರಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ ,ಅವರು ಸೀತಾರಾಮ ಭಜನಾ ಮಂದಿರ(ರಿ) ನಾರಳ ಮೊಗರು ಇದರ 61 ನೇ ವರ್ಷದ ಭಜನಾ ಮಂಗಳೋತ್ಸವ ಮತ್ತು 3 ದಿನಗಳ ಅಖಂಡ ಭಜನಾ ಮಂಗಲೋತ್ಸವದ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು,
ನಮ್ಮ ಸಂಸ್ಕ್ರತಿ ಶ್ರೇಷ್ಠವಾದ ಕಾರಣದಿಂದ ನಮ್ಮಲ್ಲಿ ವೈವಾಹಿಕ ಸಂಬಂಧ ಗಳು ಗಟ್ಟಿಯಾಗಿವೆ ,ವಿದೇಶಗಳಲ್ಲಿ ವಿವಾಹ ವಿಚ್ಛೇದನೆಗಳು ಹೆಚ್ಚಾಗಲು ಅಲ್ಲಿನ ಸಂಸ್ಕ್ರತಿ ಯೇ ಕಾರಣವಾಗಿದೆ ,ಇಂತಹ ವಿಶಿಷ್ಟವಾದ ನಮ್ಮ ಸಂಸ್ಕ್ರತಿಯನ್ನು ಇನ್ನೂ ಗಟ್ಟಿಗೊಳಿಸಿ ಉಳಿಸಿಕೊಳ್ಳಬೇಕಾಗಿದೆ ,ಭಜನೆ,ಭಜನಾ ಮಂದಿರಗಳು ಇದಕ್ಕೆ ಸಹಕಾರಿಯಾಗಿವೆ ,ಧರ್ಮ ಪ್ರಜ್ಞೆಯೊಂದಿಗೆ ರಾಷ್ಟ್ರಪ್ರಜ್ಞೆಯನ್ನು ಬೆಳಿಸಿಕೊಳ್ಳೋಣ ಎಂದು ಶುಭಹಾರೈಸಿದರು ,ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ ಉಪನ್ಯಾಸಕ ಆದರ್ಶ ಗೋಖಲೆ ಅವರು ಮಾತನಾಡಿ ಸರ್ವೇ ಜನಃ ಸುಖಿನೋ ಭವಂತು ಎಂದು ಪ್ರಾರ್ಥಿಸುವ ವಿಶಾಲ ಮನಸ್ಸು ನಮ್ಮದು ,ಧರ್ಮ,ಅರ್ಥ,ಕಾಮ,ಮೋಕ್ಷ ಎಂಬ ನಾಲ್ಕು ಸೂತ್ರಗಳನ್ನು ನಮ್ಮ ಹಿರಿಯರು ನಮ್ಮ ಜೀವನಕ್ಕೆ ದಾರಿ ದೀಪವಾಗಿ ನೀಡಿದ್ದಾರೆ ,ಈ ಸೂತ್ರಗಳನ್ನು ಸರಿಯಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ ,ಸಂಗೀತಕ್ಕೆ ಅಪಾರವಾದ ಶಕ್ತಿ ಇದೆ ,ಪ್ರಾಣಿ,ಪಕ್ಷಿಗಳು ,ಮರ,ಗಿಡಗಳೂ ಸಂಗೀತಕ್ಕೆ ಸ್ಪಂದಿಸಿ ಸ್ವೀಕರಿಸುತ್ತವೆ ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ,ಭಜನೆ ಎಂಬ ಸಂಗೀತ ನಿರಂತರವಾಗಿ ಮಂದಿರಗಳಲ್ಲಿ ನಡೆಯುತ್ತಿರಬೇಕು,
ನಮ್ಮ ಸುತ್ತಲೂ ಒಂದು ಅವ್ಯಕ್ತವಾದ ಶಕ್ತಿ ಸುಳಿಯುತ್ತಿರುತ್ತದೆ ಅದರ ಅನುಭವವಾಗಬೇಕಾದರೆ ನಾವು ಮಂದಿರಗಳಿಗೆ ಹೋಗಬೇಕು ,ನಮಗೆ ಆರಾಮ ಸಿಗಬೇಕಾದರೆ ಮಂದಿರದಲ್ಲಿ ವಿರಾಜಮಾನನಾಗಿರುವ ಆ ರಾಮನನ್ನು ನಾವು ನಮ್ಮ ಹೃದಯ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಬೇಕು ಎಂದರು,ಜ್ಯೋತಿ ಬೆಳಗಿಸುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಲಾಯಿತು, ಮಂಗಳೂರು ಉತ್ತರ ಕ್ಷೆತ್ರದ ಶಾಸಕ ಡಾ|ಭರತ್ ವೈ ಶೆಟ್ಟಿ, ಗಂಜಿಮಠ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಾಲತಿ ಸಭೆಯನ್ನುದ್ದೇಸಿ ಮಾತನಾಡಿದರು,
ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಅಧ್ಯಕ್ಷರಾದ ಎಂ.ಬಿ.ಪುರಾಣಿಕ್ ಸಭೆಯ ಅಧ್ಯಕ್ಷತೆ ವಹಿಸಿದ್ದರು,ಪೊಳಲಿ ರಾಜರಾಜೇಶ್ವರಿ ದೇವಳದ ಆಡಳಿತ ಮೊಕ್ತೇಸರರಾದ ಡಾ|ಮಂಜಯ್ಯ ಶೆಟ್ಟಿ, ಉದ್ಯಮಿಗಳಾದ ಅರುಣ್ ಶೆಟ್ಟಿ ಮೊಗರುಗುತ್ತು , ಗಣೇಶ್ ಭಟ್,ರಘುನಾಥ್ ಸಾಮಾನಿ,ಕರುಣಾಕರ ಶೆಟ್ಟಿ,ಶ್ರೀಪತಿ ಆಚಾರ್ಯ,ಸೂರ್ಯನಾರಾಯಣ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು,ಅಖಂಡ ಭಜನಾ ಮಂಗಳೋತ್ಸವ ಸಮಿತಿಯ ಗೌರವಾಧ್ಯಕ್ಷರು ,ಅಧ್ಯಕ್ಷರು ,ಪದಾಧಿಕಾರಿಗಳು ,ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು, ಪದಾಧಿಕಾರಿಗಳು,ಭಜನಾ ಮಂದಿರದ ಅಧ್ಯಕ್ಷರು ,ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.ಭಾಸ್ಕರ್ ಭಟ್ ಸ್ವಾಗತಿಸಿದರು,ರಮೇಶ್ ಆಚಾರ್ಯ ನಿರೂಪಿಸಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.ಸಾಂಸ್ಕ್ರತಿಕ ಕಾರ್ಯಕ್ರಮದಂಗವಾಗಿ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಮತ್ತು ರಾತ್ರಿ 8 ರಿಂದ ಹವ್ಯಾಸಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ತರಣಿಸೇನ,ಕುಶಲವ ಅಗ್ರಪೂಜೆ ಎಂಬ ಯಕ್ಷಗಾನ ಪ್ರದರ್ಶನ ಜರಗಿತು.

