ಕೊಡಗು : ಫೆಬ್ರವರಿ 08 ಮತ್ತು 09 ಫೆಬ್ರವರಿ 2020 ರಂದು ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ನಡೆದ ವಿಶ್ವಹಿಂದು ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ನಲ್ಲಿ  ಮಂಗಳೂರು ಜಿಲ್ಲಾ ಬಜರಂಗದಳ ಸಂಯೋಜಕರಾಗಿ ಪುನೀತ್ ಅತ್ತಾವರ್ ನಿಯುಕ್ತಿಗೊಂಡಿದ್ದಾರೆ, ವಿಶ್ವಹಿಂದು ಪರಿಷತ್ತಿನ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖರಾಗಿ ಪ್ರದೀಪ್ ಸರಿಪಲ್ಲ, ಜಿಲ್ಲಾ ಸಹಕಾರ್ಯದರ್ಶಿಯಾಗಿ ರವಿ ಅಸೈಗೋಳಿ, ಜಿಲ್ಲಾ ಸೇವಾ ಪ್ರಮುಖರಾಗಿ ಪ್ರವೀಣ್ ಕುತ್ತಾರ್, ಜಿಲ್ಲಾ ಧರ್ಮಾಚಾರ್ಯ ಸಂಪರ್ಕ ಪ್ರಮುಖ್ ಆಗಿ ಸಂತೋಷ್ ಕದ್ರಿ ನಿಯುಕ್ತಿಗೊಂಡಿದ್ದು, ಇವರ ಜವಾಬ್ದಾರಿಯನ್ನು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಶ್ರೀಜಗನ್ನಾಥ್ ಶಾಸ್ತ್ರಿ ಘೋಷಿಸಿದರು ಎಂದು ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

By suddi9

Leave a Reply

Your email address will not be published. Required fields are marked *