ಕೈಕಂಬ: ಎಡಪದವು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಿಂದ ಸಾರ್ವಜನಿಕ ಭಕ್ತಾಧಿಗಳಿಂದ ಹೊರೆಕಾಣಿಕೆಯನ್ನು ಮೆರವಣಿಗೆಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಸರ್ಪಪಿಸಿ, ಶ್ರೀ ಕೊಡಮಣಿತ್ತಾಯ ಕುಕ್ಕಿನಾಂತಾಯ ದೈವಗಳ ನೇಮದಂದು ಮದ್ಯಾಹ್ನ 1ಗಂಟೆಗೆ ಪಲ್ಕೆ ರತೀಶ್ ಭಟ್ ಪ್ರಧಾನ ಪುರೋಹಿತರ ನೇತೃತ್ವದಲ್ಲಿ ಪಲ್ಲ ಪೂಜೆ ನೇರವೇರಿಸಿ ನಂತರ 4 ಗಂಟೆಯವರೆಗೆ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೋಕ್ತೇಸರ ಕೆ.ಸನತ್ ಕುಮಾರ್ ಪಡಿವಾಳ ದೆಪ್ಪದ ಗುತ್ತು, ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಕೋಟ್ಯಾನ್, ಮುರಳೀಧರ ಕೋಟ್ಯಾನ್, ಮಾಸ್ಟರ್ ನಾಗೇಶ್ ಪೂಜಾರಿ, ಉಮೇಶ್ ಪೂಜಾರಿ, ಜಯರಾಮ್ ಪೂಜಾರಿ, ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.




