ವ್ಯಕ್ತಿ ಮೃತಪಟ್ಟಾಗ, ಕೆಲವೊಮ್ಮೆ ಪಾರ್ಥಿವ ಶರೀರವನ್ನು ವಿದೇಶ ದೂರದ ಊರಿನಲ್ಲಿ ಇರುವ ಸಂಬಂಧಿಕರು ಆಗಮಿಸುವ ವರೆಗೆ ಸುರಕ್ಷಿತವಾಗಿ ಕಾಯಬೇಕಾದ ಸಂದರ್ಭಗಳು ಎದುರಾಗುತ್ತವೆ. ಅಂತಹ ಸಂದರ್ಭಗಳಲ್ಲಿ ಶವ ರಕ್ಷಿಸಿ ಇಡಲು, ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ಕಳೆದ ಮೂರು ವರ್ಷಗಳಿಂದ ವಿದ್ಯುತ್ ಚಾಲಿತ ಸಂಚಾರಿ ಶವ ರಕ್ಷಣಾ ಯಂತ್ರವನ್ನು ಉಚಿತವಾಗಿ ಒದಗಿಸುತ್ತ ಬಂದಿದೆ.

8bfd652f-56ba-48f8-a256-bff5e09c5d1c

ಕಾರ್ಕಳ, ಕಾಪು, ಬ್ರಹ್ಮಾವರ, ಹೆಬ್ರಿ, ಕುಂದಾಪುರ ತಾಲೂಕುಗಳು, ಸಮಿತಿಯ ಸೇವೆ ಒದಗಿಸುವ ವ್ಯಾಪ್ತಿಯ ಪ್ರದೇಶಗಳಾಗಿವೆ. ವಿದ್ಯುತ್ ಚಾಲಿತ ಶೀತಲಿಕೃತ ಶವ ರಕ್ಷಣಾ ಯಂತ್ರದ ಸಾಗಟದ ವೆಚ್ಚವನ್ನು ಬಳಕೆದಾರರು ಭರಿಸ ಬೇಕಾಗುತ್ತದೆ. ಬಳಕೆ ಮುಗಿದ ಬಳಿಕ ಯಂತ್ರವನ್ನು ಕ್ಲಪ್ತ ಸಮಯಕ್ಕೆ ಸಮಿತಿಗೆ ತಂದೊಪ್ಪಿಸ ಬೇಕಾಗುತ್ತದೆ. ಯಂತ್ರದ ಅವಶ್ಯಕತೆ ಇದ್ದವರು ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು ಅವರನ್ನು ಸಂಪರ್ಕಿಸ ಬಹುದೆಂದು ಜಿಲ್ಲಾ ನಾಗರಿಕ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕ ಸಂಖ್ಯೆ:- 8660901016, 9164901111

By suddi9

Leave a Reply

Your email address will not be published. Required fields are marked *