ಮಂಜೇಶ್ವರ: ಮೀಯಪದವು ಶಾಲೆಯ ಶಿಕ್ಷಕಿ ರೂಪಶ್ರೀ ಸಾವಿನ ಬಗ್ಗೆ ತನಿಖೆ ಮುಂದುವರಿದಿದ್ದು ಮೊಬೈಲ್, ವ್ಯಾನಿಟಿ ಬ್ಯಾಗ್, ಪೋನ್ ಹಾಗೂ ಆಭರಣ ಇದುವರೆಗೆ ಪತ್ತೆಯಾಗದೆ ಸಾವಿನ ಬಗ್ಗೆ ಶಂಕೆ ವ್ಯಕ್ತ ವಾಗಿದೆ. ಸಂಬಂಧಿಕರು ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಸೋಮವಾರ ಮಿಯಪದವಿನಲ್ಲಿ ಕುಟುಂಬಶ್ರೀ , ಶಿಕ್ಷಕರ ಸಂಘಟನೆ ಗಳು ಪ್ರತಿಭಟನೆ ನಡೆಅಇ ಉನ್ನತ ತನಿಖೆಗೆ ಆಗ್ರಹಿಸಿದೆ.

Hand drawn mobile
ನೀರಿಗೆ ಬಿದ್ದು ಆತ್ಮಹತ್ಯೆ ಮಾಡುವುದಾದರೆ ದುರ್ಗಿಪಳ್ಳದಲ್ಲಿ ಸ್ಕೂಟರ್ ನಿಲ್ಲಿಸಿ ಹೋಗುವ ಅವಶ್ಯಕತೆ ಏನಿತ್ತು? ಆದಿನ ರಜೆ ಹಾಕಿ ವಿವಾಹದಲ್ಲಿ ಪಾಲ್ಗೊಂಡು ಬಳಿಕ ಪುತ್ರಿಯ ಶಾಲೆ ಶುಲ್ಕ ಪಾವತಿಸಿ ಆತ್ಮಹತ್ಯೆ ವಮಾಡುವ ಆಗತ್ಯ ಏನಿತ್ತು? ಮೃತ ದೇಹದಲ್ಲಿ ತಲೆ ಕೂದಲು ಇಲ್ಲದಿರುವುದು, ಶಿಕ್ಷಕಿಯ ಸ್ಕೂಟರನ್ನು ಹಿಂಬಾಲಿಸಿದ ಕಾರಿನ ಸಿಸಿ ಟಿವಿಯ ಲಭ್ಯತೆ ಶಿಕ್ಷಕಿಯ ಸಾವಿನ ನಿಗೂಢ ತೆ ಇರುವಂತೆ ಮಾಡಿದೆ. ಮೀಯಪದವಿನಲ್ಲಿ ಈ ಬಗ್ಗೆ ಪ್ರತಿಭಟನೆ ನಡೆಸಿದ ಕುಟುಂಬಶ್ರೀ ಸಂಘಟನೆ ಉನ್ನತ ತನಿಖೆಗೆ ಆಗ್ರಹಿಸಿದೆ.

By suddi9

Leave a Reply

Your email address will not be published. Required fields are marked *