ಕೋಲಾರ: ಡಿಸಿಸಿ ಬ್ಯಾಂಕ್ ಮೂಲಕ ಕಾಯಕ,ಬಡವರ ಬಂಧು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಿ, ಬಡವರಿಗೆ ಶೋಷಣೆ ತಪ್ಪಿಸಿ ಆರ್ಥಿಕ ಚೈತನ್ಯ ತುಂಬುವ ಬ್ಯಾಂಕ್ ನಮ್ಮದು ಎಂದು ಸಾಧಿಸಿ ತೋರಿಸಿ ಎಂದು ಸಿಬ್ಬಂದಿಗೆ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚನೆ ನೀಡಿದರು.

ಗುರುವಾರ ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ನಿರ್ದೇಶರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರ ಕಾಯಕ,ಬಡವರ ಬಂಧು ಯೋಜನೆಗಳ ಮೂಲಕ ಬಡವರ ಕೈಹಿಡಿಯುವ ಅತ್ಯುತ್ತಮ ಅವಕಾಶ ನೀಡಿದೆ, ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಯೋಜನೆಗಳ ಸಮರ್ಪಕ ಜಾರಿಗೆ ಸಂಕಲ್ಪ ಮಾಡಿ ಎಂದು ಕಿವಿಮಾತು ಹೇಳಿದರು. ಸಾಲ ನೀಡುವುದು, ವಸೂಲಿ ಮಾಡುವುದು ಬ್ಯಾಂಕಿನ ಸಹಜ ಪ್ರಕ್ರಿಯೆ, ಆದರೆ ಇಷ್ಟಕ್ಕೆ ಸೀಮಿತಗೊಳ್ಳದಿರಿ, ಬಡವರು ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವ ಈ ಯೋಜನೆಗಳನ್ನು ಅವರ ಮನೆಬಾಗಿಲಿಗೆ ತಲುಪಿಸುವ ಬದ್ದತೆಯಿಮದ ಕೆಲಸ ಮಾಡಿ, ಜನ ಇದು ನಮ್ಮ ಬ್ಯಾಂಕ್ ಎಂಬ ಭಾವನೆ ಬಲಗೊಳಿಸಿ ಎಂದು ತಾಕೀತು ಮಾಡಿದರು.

3kolar1
ಕಾಯಕ ಮತ್ತು ಬಡವರ ಬಂಧು ಯೋಜನೆಗಳನ್ನು ಡಿಸಿಸಿ ಬ್ಯಾಂಕ್ ಮೂಲಕ ಅನುಷ್ಟಾನಗೊಳಿಸಲು ಸರ್ಕಾರ ಅವಕಾಶ ನೀಡಿದೆ. ಈ ಯೋಜನೆಗಳನ್ನು ಜಾರಿಗೊಳಿಸಲು ಹಣ ಸಂಗ್ರಹಿಸುವ ಕೆಲಸ ಮಾಡುತ್ತೆವೆ, ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ 2 ಸಾವಿರದಿಂದ 10 ಸಾವಿರದವರೆಗೂ ಸಾಲ ಕೊಡಬಹುದು, ಫಲಾನುಭವಿಗಳು ಸ್ಥಳೀಯ ಸಂಸ್ಥೆಯಿಂದ ಗುರುತಿನ ಚೀಟಿ ಪಡೆದುಕೊಂಡಿರಬೇಕು ಎಂದು ಹೇಳಿದರು. ಕಾಯಕ ಯೋಜನೆಯಡಿ ಗುಡಿಕೈಗಾರಿಕೆ ಅಥವಾ ಸ್ವಯಂ ಉದ್ಯೋಗ ನಡೆಸುವವರಿಗೆ 5 ಲಕ್ಷದವರೆಗೂ ಶೂನ್ಯ ಬಡ್ಡಿದರದಲ್ಲಿ ಹಾಗೂ ಅದಕ್ಕೂ ಹೆಚ್ಚಿನ ಸಾಲ ಬೇಕಾದರೆ ವಾರ್ಷಿಕವಾಗಿ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಬಹುದು ಎಂದು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಡಿಸಿಸಿ ಬ್ಯಾಂಕಿನ ಎಲ್ಲಾ ಸೂಸೈಟಿಗಳು ಗಣಕೀರಣ ಮಾಡಲು ಈಗಾಗಲೇ ಸೋಸೈಟಿಗಳ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮಾರ್ಚ್ ಅಂತ್ಯದೊಳಗೆ 100 ಸಂಘಗಳನ್ನು ಗಣಕೀರಣ ಮಾಡಲು ಗುರಿ ಹೊಂದಿದ್ದು, ಸಾಫ್ಟ್‍ವೇರ್ ಖರೀದಿಗೆ ವಿವಿಧ ಕಂಪನಿಗಳಿಂದ ದರಪಟ್ಟಿ ಪಡೆದುಕೊಳ್ಳಲಾಗಿದ್ದ, ಉತ್ತಮ ಸೇವೆ ಕಲ್ಪಿಸುವ ಕಂಪನಿಯನ್ನು ಸೂಚಿಸಿದರೆ ಅನುಷ್ಟಾನಗೊಳಿಸಲಾಗುವುದು ಎಂದರು. ಟೈಲರಿಂಗ್ ಉದ್ಯಮಕ್ಕೆ
ಒತ್ತು ನೀಡಲು ಸಲಹೆ ಜಿಲ್ಲಾ ಪಂಚಾಯಿತಿ ಯೋಜನಾ ಅಧಿಕಾರಿ ಸುಂದರೇಶ್ ಮಾತನಾಡಿ, ಟೆಕ್ಸ್‍ಟೈಲ್ ಉದ್ಯಮ ಮಾಲೂರಿನಲ್ಲಿ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ಟೈಲರಿಂಗ್ ಉದ್ಯಮ್ಯಕ್ಕೆ ಒತ್ತು ನೀಡಲು ಸರ್ಕಾರ 15 ಸಾವಿರ ನೀಡಿದರೆ, ಡಿಸಿಸಿ ಬ್ಯಾಂಕ್‍ನಿಂದ 35 ಸಾವಿರದಿಂದ 50 ಸಾವಿರದವರೆಗೆ ಸಾಲ ಸೌಲಭ್ಯ ಕಲ್ಪಿಸಿದಲ್ಲಿ ಸ್ವಾವಲಂಭಿ ಜೀವನ ನಡೆಸಲು ಅನುವು ಮಾಡಿ ಕೊಡಬಹುದು ಎಂದು ಸಲಹೆ ನೀಡಿದರು.

1
ಬ್ಯಾಂಕ್ ನಿರ್ದೇಶಕ ಸೋಣ್ಣೆಗೌಡ, ಮಹಿಳೆಯರು ಕೂಲಿಗೆ ಹೋದರು ದಿನಕ್ಕೆ 300 ರೂ ಗಳಿಸುತ್ತಾರೆ. ಯೋಜನೆಗಳ ಮೂಲಕ ಸಾಲ ನೀಡಿದರೆ ಬಂಡವಾಳ ಹಾಕಿ ಲಾಭಗಳಿಸಬಹುದು. ಇದರ ಜತೆಗೆ ಹಣಕಾಸು ನಿರ್ವಹಣೆ ಕುರಿತು ತರಬೇತಿ ನೀಡಿದರೆ ಸಾಲವೂ ಸಮರ್ಪಕವಾಗಿ ಮರುಪಾವತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಯೋಜನೆ ಕುರಿತು ಮಾತನಾಡಿದ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಎರಡೂ ಜಿಲ್ಲೆಯಲ್ಲಿ ಮಾರ್ಚ್ ಅಂತ್ಯದೊಳಗೆ ಕನಿಷ್ಟ ತಲಾ 100 ಸಂಘ ರಚನೆ ಮಾಡಬೇಕು, ಜತೆಗೆ 100 ಸಂಘವಾದರೂ ಗಣಕೀರಣಗೊಳ್ಳಬೇಕು ಎಂದು ಸೂಚಿಸಿದರು.

ಮಹಿಳೆಯರು, ರೈತರು ಬ್ಯಾಂಕಿನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಬೀದಿ ಬದಿ ವ್ಯಾಪರಸ್ಥರಿಗೆ ಸ್ಥಳದಲ್ಲೇ ದಾಖಲೆ ಪರಿಶೀಲಿಸಿ ತಕ್ಷಣ ಶೂನ್ಯ ಬಡ್ಡಿದರದಲ್ಲಿ 10 ಸಾವಿರ ಮಂಜೂರು ಮಾಡಬಹುದು, ಪ್ರತಿದಿನ ವಸೂಲಿ ಮಾಡಿದರೆ ಸಾಲ ಮರುಪಾವತಿಯಾಗುತ್ತದೆ. ಇದಕ್ಕೇನು ಬಡವರು ಮೋಸ ಮಾಡುವುದಿಲ್ಲ ಎಂದರು. ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ಗೋವಿಂದರಾಜು, ಸಹಕಾರ ಇಲಾಖೆಯ ಉಪ ನಿಬಂಧಕ ನಿಲ್ಲಪ್ಪನವರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್.ಶಿವಕುಮಾರ್, ಖಲೀಮುಲ್ಲಾ ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *