ವಿಟ್ಲ : ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಯಶಸ್ವಿ ಕಲಾವೃಂದ, ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಅವರು ನಡೆಸಿದ ರಾಜ್ಯ ಮಟ್ಟದ ತೆಂಕು ಬಡಗು ಯಕ್ಷಗಾನ ತಾಳ ಮದ್ದಳೆ `ದೃಶ್ಯ ಸ್ಪರ್ಧಾ ಪ್ರಸ್ತುತಿ’ಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಟ್ಲದ ಯಕ್ಷಸಿಂಧೂರ ಪ್ರತಿಷ್ಠಾನದ ಕಲಾವಿದರನ್ನು ವಿಟ್ಲ ಭಗವತೀ ದೇವಸ್ಥಾನದಲ್ಲಿ ಅಭಿನಂದಿಸಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಕೇಶವ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ವಿಟ್ಲ ಜೆಸಿಐ ಘಟಕದ ಅಧ್ಯಕ್ಷ ದಿನೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಚಣಿಲ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ರಮೇಶ್ ಬಿ ಕೆ ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಂಭವಿ ವಿಲಾಸ ಅಭ್ಯಾಸಿ ತಾಳಮದ್ದಳೆ ನಡೆಸಲಾಯಿತು.

ಕಲಾವಿದರಾಗಿ ಭಾಗವತರಾಗಿ ಪ್ರಭಾ ಹರೀಶ್ ಬಾಳೆಕಾನ, ಚೆಂಡೆಮದ್ದಳೆಯಲ್ಲಿ ಅಭಿಷೇಕ್ ಬಿ ಚಣಿಲ, ಕುಮಾರ ಆಚಾರ್ಯ, ಶ್ರೀಕೃಷ್ಣ ಜೆಡ್ಡು, ಧನ್ಯಶ್ರೀ ಚಣಿಲ ಮತ್ತು ಅಕ್ಷರ ಶ್ಯಾಮ ಸಹಕರಿಸಿದರು. ಅರ್ಥಧಾರಿಗಳಾಗಿ ಚಣಿಲ ಸುಬ್ರಹ್ಮಣ್ಯ ಭಟ್, ಎಲ್ ಎನ್ ಭಟ್ ಮಳಿ, ಪೂರ್ಲುಪ್ಪಾಡಿ ಈಶ್ವರ ಭಟ್, ಜಗನ್ನಾಥ ಪುಣಚ, ಮಂಜುನಾಥ ಆಚಾರ್ಯ, ಪರಮೇಶ್ವರ ಹೆಗಡೆ, ಸಂಕಪ್ಪ ಗೌಡ ಮತ್ತು ರಮೇಶ್ ಬಿಕೆ ಭಾಗವಹಿಸಿದ್ದರು.
