ಮಂಗಳೂರು : ಮಂಗಳೂರು ಗಲಭೆಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ನೀಡುವ ಪರಿಹಾರ ವಾಪಾಸ್ ವಿಚಾರ ಘೋಷಣೆ ಮಾಡಿ ಹಿಂದೆ ಪಡೆದಿರುವುದು ಜಿಲ್ಲೆಯ ಎಲ್ಲ ಜನರಿಗೂ ನೋವು ತಂದಿದೆ ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ, ಘೋಷಣೆ ಮಾಡಿದ ಪರಿಹಾರ ಹಿಂದೆ ಪಡೆದದ್ದು ಯಾರ ಮಾತು ಕೇಳಿ ? ನೋವಿನಲ್ಲಿ ಇದ್ದ ಮನೆಯವರಿಗೆ ಅವಮಾನ ಮಾಡುವ ಪ್ರವೃತ್ತಿ ಇರಬಾರದು ಹಿಂದೆ ಮೂಲ್ಕಿಯಲ್ಲಿ ಗೋಲಿಬಾರ್ ಆದಾಗ ಪರಿಹಾರ ನೀಡಿದ್ರು ಬೇಕಾದ ವಿಡಿಯೋ ಪುಟೇಜ್ ಬಿಡುಗಡೆ ಮಾಡುತ್ತಾತೆ ಗಲಭೆ ವಿಚಾರದಲ್ಲಿ ಸರಕಾರ ಗೊಂದಲ ಉಂಟು ಮಾಡುತ್ತಿದೆ, ಇದರ ಉದ್ದೇಶ ಏನು? ಇಂತಹ ಘಟನೆ ಆಗಬಾರದು ಅಂತ ಎಲ್ಲರೂ ಹೇಳುತ್ತಾರೆ, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನು ಸಭೆ ಕರೆದು ಧೈರ್ಯ ತುಂಬುವ ಕೆಲಸ ಮಾಡಬೇಕು ಘಟನೆ ಧರ್ಮದ ಮಧ್ಯೆ ಆಗಲಿಲ್ಲ.
ಪೊಲೀಸ್ ಹಾಗೂ ಸಮುದಾಯದ ನಡುವೆ ನಡೆದದ್ದು NRC ಅನುಷ್ಟಾನ ಆಗುದಕ್ಕೆ ನಾವು ಬಿಡುವುದಿಲ್ಲ ಬಿಜೆಪಿ ಅಧಿಕಾರ ಇರುವ ರಾಜ್ಯದಲ್ಲೂ NRCಗೆ ಒಪ್ಪಿಲ್ಲ ಇಲ್ಲ, ಪರಿಹಾರ ನೀಡುದಿಲ್ಲ ಅಂತ ಹೇಳಿದ ಸಿಎಂ ಕ್ಷಮೆ ಕೇಳಬೇಕು ಸರಕಾರ ನೀಡುದಕ್ಕಿಂತಲೂ ಹೆಚ್ಚಿನ ಪರಿಹಾರ ನಾವು ನೀಡುತ್ತೇವೆ ನನ್ನ ರಾಜಕೀಯ ಜೀವನದಲ್ಲಿ ಕೇವಲ ವನ್ ಸೈಡ್ ಮಾತ ನಾಡುವುದಿಲ್ಲ, ಘಟನೆ ನೋಡಿ ಮಾತನಾಡುತ್ತೇನೆ ಇಂದು ನಮಗೆ ಬಂದ ಸಮಸ್ಯೆ ನಾಳೆ ಹಿಂದುಳಿದ ವರ್ಗ ದಲಿತರಿಗೂ ಬರಬಹುದು, ಹಿಂದೆ ಚರ್ಚ್ ದಾಳಿ ಆದಾಗಲೂ ಬಿಜೆಪಿ ಸರಕಾರ ಆಡಳಿತ ಇತ್ತು.. ಸುಪ್ರೀಂ ಕೊರ್ಟ್ ಜಡ್ಜ್ ಮೂಲಕ ನ್ಯಾಯಾಂಗ ತನಿಖೆಯಾಗಲಿ, ಸಿಟಿ ರವಿ ಚಿಕ್ಕಮಗಳೂರಿವರು ಇಲ್ಲಿ ಬಂದು ಬಾಯಿಗೆ ಬಂದ ಹಾಗೆ ಮತಾಡುವುದು ಬೇಡ ಕಾರಿನಲ್ಲಿ ಹೋಗುವಾಗ ಇಬ್ಬರನ್ನು ಕೊಂದು ಹಾಕಿದ್ದಾರೆ, ನಮ್ಮ ಜಿಲ್ಲೆಯನ್ನು ದಯವಿಟ್ಟು ಹಾಗೆ ಬಿಟ್ಟು ಬಿಡಿ ರಾಜ್ಯದ ಇತರ ಜಿಲ್ಲೆಯಮವರು ಮಾತನಾಡುದು ಬೇಕಿಲ್ಲ ಪೊಲೀಸರು ಪ್ರತಿಭಟನೆ ಬಂದ ಕೂಡಲೇ ಯಾಕೆ ಲಾಠಿ ಚಾರ್ಜ್ ಮಾಡಿದ್ದು, 144 ಸೆಕ್ಷನ್ ಇದ್ರೂ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆದಿಲ್ವ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ

