ಮಂಗಳೂರು: ಮಂಗಳೂರು ಗೋಲಿಬಾರ್ ಪ್ರಕರಣದ ತನಿಖೆ ಸಿಐಡಿ ಗೆ ನೀಡಿರುವುದು ಸರಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು ಫೈರಿಂಗ್ ಮಾಡಿದ್ದು ಪೊಲೀಸರು.ಸಿಐಡಿಯಲ್ಲಿ ಇರುವುದು ಪೊಲೀಸರು. ಪೊಲೀಸರ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ತನಿಖೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಈ ಬಗ್ಗೆ ತನಿಖೆ ಆಗಬೇಕು. ಇದನ್ನು ಅಸೆಂಬ್ಲಿ ಯಲ್ಲೂ ಒತ್ತಾಯಿಸಲಾಗುವುದು ಎಂದರು.
ಸಿಎಂ ಅವರು ಸುಳ್ಳೆ ಹೇಳುತ್ತಾರೆ. ಸತ್ಯ ಹೇಳಲು ಅವರಿಗೆ ಗೊತ್ತಿಲ್ಲ. ಅವರು ಪೊಲೀಸ್ ನವರಿಗೆ ಸರ್ಟಿಫಿಕೇಟ್ ನೀಡುತ್ತಾರೆ.ಅವರು ಪ್ರಮುಖ ಸಾಕ್ಷಿಯ ಎಂದು ಪ್ರಶ್ನಿಸಿದರು. ತೇಜಸ್ವಿ ಸೂರ್ಯ ಹೇಳಿಕೆ ಅವರ ಮನಸ್ಥಿತಿ ಗೊತ್ತಾಗುತ್ತದೆ. ಅವರು ಆರ್ ಎಸ್ ಎಸ್ ಮನುಷ್ಯ. ಅವರು ದಲಿತ, ಶೂದ್ರರನ್ನು ಶೋಷಣೆ ಮಾಡುವವರನ್ನು ಪ್ರತಿನಿಧಿಸುತ್ತಾರೆ ಎಂದರು. ದಕ್ಷಿಣ ಕನ್ನಡ ಉಡುಪಿ ಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಸಿಎಂ. ಅವರ ರಿಮೋಟ್ಕಂ ಟ್ರೋಲ್ ನಲ್ಲಿ ಸಿಎಂ ಇದ್ದಾರೆ. ಪ್ರಚೋದನಕಾರಿ ಭಾಷಣ ಮಾಡುವ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.

