ಮತ್ತು ಬರಿಸಿ ಚಿನ್ನ ಕಳವು ಮಹಿಳೆ ಸೆರೆ
ಸುದ್ದಿ9ಮಂಗಳೂರು: ಹೋಳಿಗೆಯಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಗೃಹಿಣಿಯ ಬಳಿಯಿದ್ದ ಚಿನ್ನಾಭರಣ ದೋಚಿದ ಮಹಿಳೆಯನ್ನು ಉರ್ವ ಪೋಲೀಸರು ಶುಕ್ರವಾರ ಬಂದಿಸಿದ್ದಾರೆ.
ಬಿಜೈ ನ್ಯೂರೋಡ್ ನಿವಾಸಿ ಸುಜಾತ ಯಾನೆ ಸುಮ 42ಬಂಧಿತ ಆರೋಪಿ. ಈಕೆ 2013ಸೆ.8ರಂದು ಬಿಜೈ ಸಂಕೈಗುಡ್ಡೆ ನಿವಾಸಿ ಶ್ರೀ ದೇವಿ ಎಂಬವರ ಕೈಯಿಂದ ಎರಡು ಬಳೆ ಹಾಗೂ ಎರಡು ಉಂಗುರಗಳನ್ನು ಕಳವು ಮಾಡಿದ್ದಳು.
ಶ್ರೀದೇವಿ ಅವರ ಸಮೀಪದ ಮನೆ ಖಾಲಿ ಇದ್ದು, ಅಲ್ಲಿಗೆ ಬಾಡಿಗೆಗೆ ಮನೆ ಮನೆ ನೋಡುವ ನೆಪದಲ್ಲಿ ಸುಜಾತ ತೆರಳಿದ್ದು ಸಮೀಪದ ಮನೆಯ ಶ್ರೀ ದೇವಿ ಅವರನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆಕೆ ತನ್ನಲಿದ್ದ ಹೋಳಿಗೆಯನ್ನು ನೀಡಿದ್ದಳು. ಆದರೆ ಹೋಳಿಗೆಗೆ ಆಕೆ ಅಮಲು ಪಧಾರ್ಥ ನೀಡಿದ್ದಳು. ಬಳಿಕ ಸ್ವಲ್ಪ ಹೊತ್ತಿನಲ್ಲೇ ಮೂಛರ್ೆ ಹೋದ ಶ್ರೀ ದೇವಿ ಬಳಿಯಿದ್ದ ಚಿನ್ನವನ್ನು ಸುಜಾತ ದೋಚಿದ್ದಳು. ಈ ಬಗ್ಗೆ ಕಾಯರ್ಾಚರಣೆ ನಡೆಸಿದ್ದ ಉರ್ವ ಪೋಲೀಸರು ಶುಕ್ರವಾರ ಆಕೆಯನ್ನು ಕೊಟ್ಟಾರಚೌಕಿ ಬಳಿ ಬಂಧಿಸಿದ್ದಾರೆ.

By suddi9

Leave a Reply

Your email address will not be published. Required fields are marked *