ಮಂಗಳೂರು : ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ನಿಂತಿಕಲ್‌ ಗ್ರಾ.ಪಂ ವ್ಯಾಪ್ತಿಯ ನಿಂತಿಕಲ್ಲಿಗೆ ಜಂಕ್ಷನ್‌ನಿಂದ   ಪುತ್ತೂರು, ಕಾಣಿಯೂರು, ಸುಳ್ಯ, ಬೆಳ್ಳಾರೆ, ಸುಬ್ರಹಣ್ಯ , ಸುಳ್ಯ ಬೆಳ್ಳಾರೆ ಮುಂತಾದ ಕಡೆಗಳಿಗೆ ಪ್ರಯಾಣಿಸುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅವಶ್ಯ  ಇರುವ ನಿಂತಿಕಲ್ ಎಂಬಲ್ಲಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಶೌಚಾಲಯವನ್ನು ನಿರ್ಮಿಸಲಾಗಿದ್ದರೂ ಸಾರ್ವಜನಿಕ ರ ಉಪಯೋಗಕ್ಕೆ ಬಾರದೆ ಅಕ್ರೋಶಕ್ಕೆ ತುತ್ತಾಗಿದೆ. ಕಳೆದ ಎರಡು ವರ್ಷಕ್ಕೆ ಮೊದಲು ತಾಲೂಕು ಪಂಚಾಯಿತಿ ಅನುದಾನ ಮತ್ತು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಶೌಚಾಲಯ ನಿರ್ಮಿಸಲಾಗಿದ್ದು ನೀರಿನ ಸೌಕರ್ಯ ಇಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಅಯೋಗ್ಯವೆನಿಸಿದೆ.

ff0d64cb-ec50-46c4-91e6-ed8542e422bc

ಅದರಲ್ಲೂ ಸಾರ್ವಜನಿಕರಿಗೆ ಅವಶ್ಯಕತೆ ಇರುವಂತಹ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ವಾಗಿದೆ. ಆದರೆ ಈಗ ಸದ್ಯಕ್ಕೆ ನೀರಿನ ವ್ಯವಸ್ಥೆ ಮತ್ತು ಶುಚಿತ್ವದ ಕೊರತೆ ಯಿಂದಾಗಿ ಸಾರ್ವಜನಿಕರು ಶೌಚಾಲಯಕ್ಕೆ ಹೋಗುತ್ತಿಲ್ಲ. ಗ್ರಾಮ ಪಂಚಾಯಿತಿ ಈ ಕಡೆ ಗಮನಹರಿಸಿಲ್ಲ ಎಂದು ಸಾರ್ವಜಿನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕನಿಷ್ಠ ಪಕ್ಷ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯನ್ನು ಆದಷ್ಟು ಬೇಗ ಕಲ್ಪಿಸಿ ಸಾರ್ವಜನಿಕರಿಗೆ ಅವಶ್ಯಕತೆ ಆಗುವ ರೀತಿಯಲ್ಲಿ ಸಾರ್ವಜನಿಕರಿಗೆ ಉಪಯೋಗ ವಾಗುವಂತೆ ಆದಷ್ಟು ಬೇಗ ಮಾಡಬೇಕಾಗಿ ಸಾರ್ವಜನಿಕರು  ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *