ಮಂಗಳೂರು: ಚಕ್ರಪಾಣಿ ಸೇವಾ ಸಮಿತಿಯ ವತಿಯಿಂದ 29ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜ್ರಂಭಣೆಯಿಂದ ಜರಗಿತು. ಶ್ರೀ ಗಣೇಶ ದೇವರ ವಿಗ್ರಹ ಪ್ರತಿಷ್ಠೆ ಮತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಿರಣ್ ಪೈ, ದಿನೇಶ್ ಕೆ.ಪಿ., ಶರತ್ ಚಂದ್ರ, ರಮೇಶ್ ಕುಮಾರ್ ಎಸ್, ಅಬ್ದುಲ್ ರವೂಫ್ ಅತಿಥಿಗಳಾಗಿ ಉಪಸ್ಥಿತರಿದ್ದರು.ಸಂಜೆ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕೆ.ಬಿ. ಜಯರಾಜ್ ರೈ, ಶ್ರೀ ವಿಶ್ಬಾಸ್ ಕುಮಾರ್ ದಾಸ್, ಶ್ರೀ ಸಂತೋಷ್ ಕುಮಾರ್ ಶೆಟ್ಟಿ , ರಾಜರತ್ನ ಸನಿಲ್, ಧರ್ಮಣ ನಾೖಕ್, ಅತಿಥಿಗಳಾಗಿ ಭಾಗವಹಿಸಿದರು.
ಸೇವಾ ಸಮಿತಿಯ ಗೌರವಾಧ್ಯಕ್ಷರಾದ ರತೀಂದ್ರನಾಥ್ ಎಚ್. ಉಪಸ್ಥಿತರಿದ್ದರು. ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ನಡೆದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುರೇಶ್ ಅತ್ತಾವರ ಇವರ ಶಿಷ್ಯ ವ್ರಂದದವರಿಂದ “ಒರ್ತಿ ಬಿರ್ಸೆದಿ” ತುಳು ಜಾನಪದ ಶೈಲಿಯ ನ್ರತ್ಯ ರೂಪಕದ ಪ್ರದರ್ಶನ ಜರಗಿತು. ಶ್ರೀ ಗಣೇಶ ದೇವರಿಗೆ ಸಾಮೂಹಿಕ ಗಣಯಾಗ, ರಾಶಿ ಅಪ್ಪದ ಪೂಜೆ, ಸರ್ವಾಲಂಕಾರ ರಂಗ ಪೂಜೆಯು ಜರಗಿತು. ಪ್ರ.ಕಾರ್ಯದರ್ಶಿ ಲಲ್ಲೇಶ್ ಕುಮಾರ್ ವಂದಿಸಿದರು. ಶ್ರೀ ಕ್ಷಿತಿ ಮಮ್ಲೂರ್ ಕಾರ್ಯಕ್ರಮ ನಿರೂಪಿಸಿದರು.
