ವಿಟ್ಲ:ಸೈಂಟ್ ರೀಟಾ ವಿದ್ಯಾಸಂಸ್ಥೆ  ಇದರ ಆಶ್ರಯದಲ್ಲಿ  ಆ.3ರಂದು  ಶನಿವಾರದಂದು ಆಟಿಕೂಟವನ್ನು ಸಂಭ್ರಮದಿಂದ ಆಚರಿಸಲಾಯಿತು.  ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ವಂದನೀಯ ಫಾ| ಎರಿಕ್ ಕ್ರಾಸ್ತಾ, ಆಡಳಿತ ಮಂಡಳಿ ಸದಸ್ಯರಾದ  ಚಾಲ್ರ್ಸ್ ಸಿಕ್ವೇರಾ ಹಾಗೂ  ಉಲ್ಲಾಸ್ ಸಿಕ್ವೇರಾ, ಸಮಿತಿ ಸದಸ್ಯರಾದ  ಮಹಮ್ಮದ್ ಶಾಫಿ ಹಾಗೂ ಜಂಟಿ ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವು ತೆಂಗಿನ ಸಿರಿ ಅರಳುವುದರೊಂದಿಗೆ ಉದ್ಘಾಟನೆಗೊಂಡಿದ್ದು, ವಿದ್ಯಾರ್ಥಿಗಳು ತುಳುನಾಡಿನ ಸಂಸ್ಕೃತಿಯನ್ನು ಹಾಡು, ಭಾಷಣದೊಂದಿಗೆ ಬಿಂಬಿಸಿ ಸಂಭ್ರಮಿಸಿದರು. ಮಧ್ಯಾಹ್ನ ವಿದ್ಯಾರ್ಥಿಗಳಿಗೆ ಪತ್ರೊಡೆಯ ಸವಿಯನ್ನು ನೀಡಲಾಯಿತು.ಕಾರ್ಯಕ್ರಮವನ್ನು  ಸಚಿನ್ ಎಮ್ ನಿರೂಪಿಸಿ, ಜಯರಾಮ ಶಾಸ್ತ್ರಿಯವರು ವಂದನಾರ್ಪಣೆ ನೀಡಿದರು.SHV_9707

By suddi9

Leave a Reply

Your email address will not be published. Required fields are marked *