ಮೂಡುಬಿದಿರೆ : ಮುಂಗಾರು ವಿಳಂಬ ಮತ್ತು ಬೇಸಿಗೆಯ ತಾಪದಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸಂಪನ್ಮೂಲಗಳು ಕ್ಷೀಣಿಸಿರುವ ಹಿನ್ನಲೆಯಲ್ಲಿ ಜೂನ್ 1ರಿಂದ ಎರಡು ದಿನಗಳಿಗೊಮ್ಮೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲಾಗುವುದೆಂದು ಪುರಸಭೆಯ ಪ್ರಕಟಣೆ ತಿಳಿಸಿದೆ.

Moodbidri TMC
ಪಲ್ಗುಣಿ ನದಿ ಮತ್ತು ಬೋರ್‍ವೆಲ್‍ಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದ್ದು ಮುಂಗಾರು ಆರಂಭದವರೆಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಭಾರ ಮುಖ್ಯಾಧಿಕಾರಿ ಸೂರ್ಯಕಾಂತ ಖಾರ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *