ಮೂಡುಬಿದಿರೆ: ಮೇ 29ರಂದು ಮೂಡುಬಿದಿರೆ ಪುರಸಭೆಯ 23 ವಾರ್ಡುಗಳಿಗೆ ನಡೆಯುವ ಚುನಾವಣೆಗೆ ಈಗಾಗಲೇ 85 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಸೋಮವಾರದಂದು 8 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದು ಉಳಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ ಹಾಗೂ ಎಸ್ಡಿಪಿಐ ಪಕ್ಷೇತರರು ಸೇರಿದಂತೆ ಒಟ್ಟು 77 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.

ವಾರ್ಡ್1ರಲ್ಲಿ ಕಾಂಗ್ರೆಸ್ನ ಮಮತಾ, ಬಿಜೆಪಿಯ ಆಶಾಲತಾ, ಬಿಎಸ್ಪಿಯ ಬೇಬಿ.ಎಸ್ ಸಾಲ್ಯಾನ್, ವಾಡ್ 2ರಲ್ಲಿ ಬಿಜೆಪಿಯ ಎಸ್.ಗೋಪಾಲ ಶೆಟ್ಟಿಗಾರ್, ಕಾಂಗ್ರೆಸ್ನ ಪುರಂದರ, ಬಿಎಸ್ಪಿಯ ಎಸ್. ಸತೀಶ್ ಸಾಲ್ಯಾನ್, ವಾರ್ಡ್3ರಲ್ಲಿ ಕಾಂಗ್ರೆಸ್ನ ಪಿ.ಕೆ.ತೋಮಸ್, ಬಿಜೆಪಿಯ ಭರತ್ ಕುಮಾರ್, ಬಿಎಸ್ಪಿಯ ಜಿ.ಕೆ.ಸುಂದರ, ವಾರ್ಡ್4ರಲ್ಲಿ ಕಾಂಗ್ರೆಸ್ನ ವಿನಯ ಜೆ.ಶೆಟ್ಟಿ, ಬಿಜೆಪಿಯ ಸೌಮ್ಯ, ಜೆಡಿಎಸ್ನ ಕುಶಲ ಶೆಟ್ಟಿ, ವಾರ್ಡ್5ರಲ್ಲಿ ಬಿಜೆಪಿಯ ನಾಗರಾಜ ಪೂಜಾರಿ, ಜೆಡಿಎಸ್ನ ಸುಧೀಶ್ ಕುಮಾರ್, ಕಾಂಗ್ರೆಸ್ನ ಪ್ರಕಾಶ್, ವಾರ್ಡ್ 6ರಲ್ಲಿ ಬಿಜೆಪಿಯ ದಿವ್ಯಾ ಎಂ, ಕಾಂಗ್ರೆಸ್ನ ದೀಕ್ಷಿತಾ, ಬಿಎಸ್ಪಿಯ ಸುನೀತಾ, ವಾರ್ಡ್ 7ರಲ್ಲಿ ಬಿಜೆಪಿಯ ರಾಜೇಶ್ ನಾಯ್ಕ್, ಜೆಡಿಎಸ್ನ ದಯಾನಂದ, ವಾರ್ಡ್ 8ರಲ್ಲಿ ಕಾಂಗ್ರೆಸ್ನ ಶಕುಂತಲಾ, ಬಿಜೆಪಿಯ ನೀತಾ ಬೋವಿ, ಬಿಎಸ್ಪಿಯ ಬೇಬಿ ಎಸ್.ಸಾಲ್ಯಾನ್, ವಾರ್ಡ್ 9ರಲ್ಲಿ ಕಾಂಗ್ರೆಸ್ನ ಪದ್ಮಶ್ರೀ ಜೈನ್, ಬಿಜೆಪಿಯ ಶ್ವೇತಾ ಕುಮಾರಿ, ಪಕ್ಷೇತರ ಅಭ್ಯರ್ಥಿಯಾಗಿ ಗೀತಾ ಆಚಾರ್ಯ.
ವಾರ್ಡ್10ರಲ್ಲಿ ಎಸ್ಡಿಪಿಐನ ಆಸೀಫ್ ಶೇಖ್, ಸಿಪಿಐಎಂನ ಮಹಮ್ಮದ್ ತಶ್ರೀಫ್, ಜೆಡಿಎಸ್ನ ಸಯ್ಯದ್ ಹುಸೇನ್, ಬಿಎಸ್ಪಿಯ ಎಂ.ಕೆ ಅಬೂಬಕ್ಕರ್, ಕಾಂಗ್ರೆಸ್ನ ಹಿಮಾಯಿತುಲ್ ಶೇಖ್ ನಜೀರ್, ಬಿಜೆಪಿಯ ಹನೀಫ್, ವಾರ್ಡ್ ನಂಬರ್ 11ರಲ್ಲಿ ಬಿಜೆಪಿಯ ನವೀನ್ ಶೆಟ್ಟಿ, ಜೆಡಿಎಸ್ನ ಧರ್ಮೇಂದ್ರ ಪಿ., ಎಸ್ಡಿಪಿಐಯ ಎಡ್ವರ್ಡ್ ಪಿರೇರಾ, ವಾರ್ಡ್12ರಲ್ಲಿ ಜೆಡಿಎಸ್ನ ಪ್ರೇಮಾ ಎಸ್. ಸಾಲ್ಯಾನ್, ಬಿಜೆಪಿಯ ಸ್ವಾತಿ ಎಸ್.ಪ್ರಭು, ವಾರ್ಡ್13ರಲ್ಲಿ ಕಾಂಗ್ರೆಸ್ನ ಸುರೇಶ್ ಪ್ರಭು, ಬಿಜೆಪಿಯ ಎಂ.ರಾಜೇಶ್ ಮಲ್ಯ ಜೆಡಿಎಸ್ನ ಹೈದರಾಲಿ, ಬಿಎಸ್ಪಿಯ ಉಮೇಶ್, ವಾರ್ಡ್14ರಲ್ಲಿ ಕಾಂಗ್ರೆಸ್ನ ಆಲ್ವಿನ್ ವಾಲ್ಟರ್ ಡಿಸೋಜಾ, ಬಿಜೆಪಿಯ ಪ್ರಸಾದ್ ಕುಮಾರ್, ಜೆಡಿಎಸ್ನ ಅಶೋಕ್ ಶೆಟ್ಟಿ, ಅಮರ್ಕೋಟೆ ಪಕ್ಷೇತರ, ಬಿಎಸ್ಪಿಯ ಸುಲೋಚನ ಎಂ, ವಾರ್ಡ್15ರಲ್ಲಿ ಕಾಂಗ್ರೆಸ್ನ ರೂಪಾ, ಬಿಜೆಪಿಯ ಸವಿತಾ, ಬಿಎಸ್ಪಿಯ ಸುನೀತಾ, ವಾರ್ಡ್16ರಲ್ಲಿ ಕಾಂಗ್ರೆಸ್ನ ಕೊರಗಪ್ಪ, ಸಿಪಿಐಎಂನ ಗಿರಿಜಾ, ಬಿಜೆಪಿಯ ಸೋಮೇಶ್, ಬಿಎಸ್ಪಿಯ ಜಗನ್ನಾಥ.
ವಾರ್ಡ್17ರಲ್ಲಿ ಕಾಂಗ್ರೆಸ್ನ ಇಕ್ಬಾಲ್ ಖಾಸಿಂ ಬ್ಯಾರಿ, ಎಸ್ ಸತೀಶ್ ಸಾಲ್ಯಾನ್ ಬಿಎಸ್ಪಿ, ಬಿಜೆಪಿಯ ಶರತ್, ಸಿಪಿಐಎಂನ ರಿಯಾಝ್ ಮಾಂತೂರು, ವಾರ್ಡ್ 18ರಲ್ಲಿ ಕಾಂಗ್ರೆಸ್ನ ಜೊಸ್ಸಿ ಮಿನೇಜಸ್, ಬಿಜೆಪಿಯ ಕೆ.ಕೃಷ್ಣರಾಜ ಹೆಗ್ಡೆ, ಬಿಎಸ್ಪಿಯ ರಮೇಶ್ ಬೋಧಿ, ಎಸ್.ಡಿ.ಪಿಐಯ ಇಸ್ಮಾಯಿಲ್, ವಾರ್ಡ್19ರಲ್ಲಿ ಬಿಜೆಪಿಯ ಸುಜಾತ, ಕಾಂಗ್ರೆಸ್ನ ಹರಿಣಾಕ್ಷಿ, ವಾಡ್ ನಂಬ್ರ 20ರಲ್ಲಿ ಕಾಂಗ್ರೆಸ್ನ ಸುರೇಶ್ ಕೋಟ್ಯಾನ್, ಬಿಜೆಪಿಯ ದಿನೇಶ್, ಬಿಎಸ್ಪಿಯ ರಾಜು, ಪಕ್ಷೇತರನಾಗಿ ಅನಿಲ್ ಲೋಬೋ, ವಾರ್ಡ್21ರಲ್ಲಿ ಬಿಜೆಪಿಯ ಜಯಶ್ರೀ, ಕಾಂಗ್ರೆಸ್ನ ಪೌಲೀನ್ ಕ್ಲೋಸಿ ಪಿಂಟೋ, ಪಕ್ಷೇತರರಾಗಿ ಲೇಷ್ಮಾ ಜೋಯಲ್ ಲೋಬೋ, ವಾರ್ಡ್ 22ರಲ್ಲಿ ಬಿಜೆಪಿಯ ಕುಶಲ, ಕಾಂಗ್ರೆಸ್ನ ಸರಸ್ವತಿ ವಾರ್ಡ್23ರಲ್ಲಿ ಕಾಂಗ್ರೆಸ್ನ ಲಕ್ಷ್ಮೀ, ಬಿಜೆಪಿಯ ಧನಲಕ್ಷ್ಮೀ ಮತ್ತು ಬಿಎಸ್ಪಿಯ ಲತಾ ಅಂತಿಮ ಕಣದಲ್ಲಿದ್ದಾರೆ.
