ವಿಟ್ಲ: ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ಮತ್ತು ಮಹಬಲೇಶ್ವರ ಸೇರಾಜೆ ಇವರ ವತಿಯಿಂದ `5ನೇ ಸೂಪರ್ ಸ್ಟಾರ್ ಸಿಂಗರ್ 2019′ ಕರೋಕೆ ಗಾಯನ ಸ್ಪರ್ಧೆಯು ವಿಟ್ಲದ ವಿಠಲ ಪ್ರೌಢ ಶಾಲಾ ಸಭಾ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಇವರು ದೀಪ ಬೆಳಗಿಸಿ ಉದ್ಘಟಿಸಿದರು.ಮುಖ್ಯ ಅತಿಥಿಗಳಾಗಿ ವಿಠಲ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ್, ವಿಠಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಣ್ಣಪ್ಪ ಸಾಸ್ತಾನ, ಸಂಗೀತ ವಿದ್ವಾನ್ ನಾರಾಯಣ ಶರ್ಮ ಮೀಯಂಪದವು ಭಾಗವಹಿಸಿದ್ದರು. ಆಯೋಜಕ ಮಹಬಲೇಶ್ವರ ಸೇರಾಜೆ ವೇದಿಕೆಯಲ್ಲಿದ್ದರು. ಆಯೋಜಕ ವಿಟ್ಲ ನ್ಯೂ ಶೈನ್ ನ ಪ್ರವೀನ್ ಜಯಾ ಸ್ವಾಗತಿಸಿದರು. ಅಶ್ವಿನಿ ಶ್ರೇಯಾ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಸಾತ್ವಿಕ್ ಬಂಟ್ವಾಳ, ರಕ್ಷಣ್ ರಾವ್ ಧರ್ಮಸ್ಥಳ, ಧಾರಿಣಿ ಕುಂದಾಪುರ, ಸಾನ್ವಿ ವಿಟ್ಲ, ತನುಶ್ರೀ ಮಂಗಳೂರು, ಮೇಘನ ಬಿ ಸಿ ರೋಡ್, ಜನ್ಯ ಅನಂತಾಡಿ ಮತ್ತು ಸೀನಿಯರ್ ವಿಭಾಗದಲ್ಲಿ ಸ್ವಾತಿ ಪೆರ್ಲ, ಅಮಿಶ್ ಕುಮಾರ್ ಬಿ ಸಿ ರೋಡ್, ಮಾನಸ ಕಾಸರಗೋಡು, ಪವಿತ್ರ ಆಚಾರ್ಯ ಪಾಣೆಮಂಗಳೂರು ಹಾಗೂ ಮಿಲನ್ ಕುಮಾರ್ ಕುಂಬ್ಳೆ ಫೈನಲ್ ಹಂತಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ಹಂತ ಆಡಿಶನ್ ಪೆರ್ಲದ ಸತ್ಯನಾರಾಯಣ ಹೈಸ್ಕೂಲ್ ನಲ್ಲಿ ಎ.12 ರಂದು ನಡೆಯಲಿದ್ದು, ಅದ್ದೂರಿ ಗ್ರಾಂಡ್ ಫಿನಾಲೆ ಕಾರ್ಯಕ್ರಮವು ಭಾರತೀ ಸದನ ಪೆರ್ಲ ಇಲ್ಲಿ ಎ.21 ರಂದು ನಡೆಯಲಿದೆ.

