ಮಾಣಿ: ‘ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನ. ಈ ಕಲೆ ಕೇವಲ ಪ್ರದರ್ಶನಕ್ಕೆ ಮಾತ್ರ ಸೀಮಿತವಾಗಿರದೆ ಬದುಕಿನ ಸೂಕ್ಷ್ಮಾತಿಸೂಕ್ಷ್ಮಗಳನ್ನು ತಿಳಿಸಿಕೊಟ್ಟು, ಜೀವನದ ದಾರಿಯನ್ನು ಕಂಡುಕೊಳ್ಳಲು ಸಹಾಯಮಾಡುತ್ತದೆ’. ಎಂದು ಸಂಪನ್ಮೂಲ ವ್ಯಕ್ತಿಗಳಾದ , ಯಕ್ಷಗಾನ ಕಲಾವಿದ ಶ್ರೀ ಸತೀಶ್ ಆಚಾರ್ಯ ಹೇಳಿದರು.ಅವರು ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಯೋಗ ತರಬೇತುದಾರರಾದ  ರಾಜೇಶ್ ಎನ್. ಮಾತನಾಡಿ ಟಿ.ವಿ. ಮೊಬೈಲ್ ಗಳ ನಿರಂತರ ಬಳಕೆಯು ಏಕಾಗ್ರತೆಯನ್ನು ಕುಗ್ಗಿಸುತ್ತದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಶರೀರವು ಮಾನಸಿಕವಾಗಿ , ದೈಹಿಕವಾಗಿ ಸದೃಢಗೊಳ್ಳತ್ತದೆ’ ಎಂದರು.

IMG_2579

ಶಾಲಾ  ಆಡಳಿತಾಧಿಕಾರಿ ಸಿ.ಶ್ರೀಧರ್ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪಠ್ಯಕಲಿಕೆಗೆ ಮಾತ್ರ ಒತ್ತು ನೀಡದೆ, ಸಹಪಠ್ಯ ಚಟುವಟಿಕೆಗಳಲ್ಲೂ ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ||  ಬಿ.ಎಸ್ ನಾಯಕ್, ಕಾರ್ಯದರ್ಶಿ ನಾರಾಯಣ ಶೆಟ್ಟಿ ಕೊಂಬಿಲ, ಟ್ರಸ್ಟಿ ರೊಟೇರಿಯನ್ ಶ್ರೀ ಪುಷ್ಪರಾಜ್ ಹೆಗ್ಡೆ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೇಸ್ .ಪಿ.ಸಲ್ದಾನಾ, ಕರಾಟೆ ತರಬೇತುದಾರರಾದ ಜಗದೀಶ್, ಯಕ್ಷಗಾನ ತರಬೇತುದಾರರಾದ ಶ್ರೀ ಬಾಲಕೃಷ್ಣ ಭರತನಾಟ್ಯ ವಿದುಷಿ ಪ್ರಮೀಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಸಹಪಠ್ಯ ಚಟುವಟಿಕೆಗಳಾದ ಯೋಗ, ಕರಾಟೆ, ಚೆಸ್, ಸಂಗೀತ ಭರತನಾಟ್ಯ, ಯಕ್ಷಗಾನ ತರಗತಿಗಳ ಬಗ್ಗೆ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕಿ ಮಮತಾ ಸ್ವಾಗತಿಸಿ, ರೀಟಾ ಫೆರ್ನಾಂಡಿಸ್ ವಂದಿಸಿದರು. ರಶ್ಮಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *