ಪೊಳಲಿ: ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.1 ಸೋಮವಾರ 18 ದಿನದ ಜಾತ್ರೆಯಂದು ಕೋಳಿಕುಂಟ ಬೆಳ್ಳಿರಥೋತ್ಸವ ನಡೆಯಲಿದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ 18ರವರಗೆ ಮಾಂಸಾಹಾರ ಸೇವನೆ ನಿಷಿದ್ದ.
ದೇವರಲ್ಲಿ ಪ್ರಾರ್ಥಿಸಿ ದೇವಸ್ಥಾನದ ಎಡ ಬದಿಯಲ್ಲಿ ಇದ್ದ ಕೋಳಿ ಗುಂಟದ ಗದ್ದೆಯಲ್ಲಿ [ನಟ್ಟಿಲ್] ಒಂದನೆ ಮತ್ತು ಎರಡನೆ ಮನೆಯವರು ನಾಲ್ಕು ಕೋಳಿಗಳನ್ನು ಗದ್ದೆಯ ನಾಲ್ಕು ಮೂಲೆಯ ಗೂಂಟದಲ್ಲಿ ಕಟ್ಟಿ ಕೋಳಿಗಳನ್ನು ಔಪಚಾರಿಕವಾಗಿ[ಕೋಳಿಅಂಕ] ಸರಿಸಮಾನವಾಗಿ ಹಾರಿಸಿದ ನಂತರ ಸಾವಿರ ಸೀಮೆಯ ಭಕ್ತರು ಮಾಂಸಹಾರ ಸೇವನೆ ಮಾಡುವುದು ಸಾಂಪ್ರ್ರದಯ . ಇದಕ್ಕೆ ಕೋಳಿಕುಂಟ ಎನ್ನುವರು ಅಂದು ರಾತ್ರಿ ಉತ್ಸವ ಬಲಿಯ ನಂತರ ದೇವರ ಬೆಳ್ಳಿರಥೋತ್ಸವ ನಡೆಯಲಿದೆ.

