ಪೊಳಲಿ:ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವ ಎಂದು ಕರೆಯಲ್ಪಡುವ ಉತ್ಸವಾದಿಗಳು ಮಾತ್ರ ಉತ್ಸವ ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆಮಾ.14ರಂದು ದ್ವಜಾರೋಹಣಗೊಂಡು ಎಪ್ರಿಲ್12ರ ವರೇಗೆ ಜಾತ್ರೆಯ ಉತ್ಸವಾದಿಗಳು ನಡೆಯುತ್ತದೆ.ಈ ವರ್ಷ 29 ದಿನದ ಜಾತ್ರೆಯು ನಡೆಯುತ್ತದೆ.ದ್ವಜಾರೋಹಣಗೊಂಡು ಪ್ರತಿ ಐದು ದಿವಸಕ್ಕೊಮ್ಮೆ ದಂಡಮಾಲೋತ್ಸವ ನಡೆಯುತ್ತದೆ”ಸುಬ್ರ್ರಹ್ಮಣ್ಯಸ್ವಾಮಿಗೆ ಕೇಪುಳ ಹೂವಿನ ದಂಡೆಯ ಅಲಂಕಾರ’ದಂಡಮಾಲೆಎಂದರೆ ;ಪ್ರತಿ ಐದು ದಿನಕ್ಕೊಮ್ಮೆ ಕೇಪುಳ ಹೂವಿನಿಂದ ತಯರಿಸಲ್ಪಟ್ಟು ಸುಬ್ರಹ್ಮಣ್ಯ ಸ್ವಾಮಿಗೆ ಹೂವಿನ ದಂಡೆಯನ್ನು ಅಲಂಕಾರ ಮಾಡಿ ಹೊರಡುವ ಉತ್ಸವ ಬಲಿಗೆ ದಂಡಮಾಲೆ ಎಂದು ಕರೆಯುವರು.ಪಾಟಾಳಿ ವರ್ಗದವರು ದಂಡಮಾಲೆಯ ಎರಡು ದಿನದ ಮುಂಚೆ ಗುಡ್ಡದ ಕೇಪುಳ ಹೂವನ್ನು ಹುಡುಕಿ ಒಟ್ಟು ಸೇರಿಸುತ್ತಾರೆ ಸುಮಾರು ಮೂರು ಬುಟ್ಟಿನಷ್ಟುಕೇಪುಳ ಹೂವನ್ನು ತುಂಬಿಸಿ ಅದನ್ನು ಗೊನೆಹಾಕಿದ ಕದಳಿಬಾಳೆ ಗಿಡದ ಹಗ್ಗದಲ್ಲಿ ಕೇಪುಳ ಹೂವಿನ ದಂಡೆಯನ್ನು ನೆಯುತ್ತಾರೆ.ಪ್ರತಿ ಐದು ದಿವಸಕ್ಕೋಮ್ಮೆ ಕೇಪುಳ ಹೂವಿನ ದಂಡೆಯನ್ನು ಬದಲಾಯಿಸುತ್ತಾರೆ ಇಪ್ಪತ್ತು ದಿನಗಳವರೇಗೆ ದಂಡಮಾಲೋತ್ಸವ ಜರಗುತ್ತದೆ.ಕೇಪುಳ ಹೂವಿನ ದಂಡೆಯನ್ನು ಸುಬ್ರಹ್ಮಣ್ಯಸ್ವಾಮಿಗೆ ಅಲಂಕರಿಸುತ್ತಾರೆ.

30vp dandamale

“ಸುಬ್ರಹ್ಮಣ್ಯಸ್ವಾಮಿ ದೇವರ ಬಲಿಯು ಸಂಜೆ 6.30ಕ್ಕೆ ಬಲಿ ಹೊರಡುವುದು”ಬಲಿಹೊರಡುವ ಮುಂಚೆ ಪದಾರ್ಥಿಗಳು ತಂತ್ರಿಗಳಿಂದ ಅಪ್ಪಣೆ ಪಡೆದು ದೀವಿಟಿಗೆ ಹಿಡಿಯುವವರಿಗೆ ಹೊರಿಸಲು ತಿಳಿಸುವರು.ಪದಾರ್ಥಿಗಳು ಪಾಣೆ ಬಾರಿಸಿದ ನಂತರ ದೇವರ ಗರ್ಭಗುಡಿಯಲ್ಲಿ ಸುಭ್ರಹ್ಮಣ್ಯ ಸ್ವಾಮಿ ದೇವರನ್ನು ಪಾಣಿಪೀಠದಲ್ಲಿ ಕುಳ್ಳಿರಿಸಿ ತಂತ್ರಿಗಳು ತಂತ್ರ ತೂಕುವರು.ಮೂರು ದೀವಿಟಿಗೆ “ಒಂದು ದೀವಿಟಿಗೆ ಸುಬ್ರಹ್ಮಣ್ಯ ಸ್ವಾಮಿ ದೇವರಿಗೆ ಇನ್ನೊಂದು ದೀವಿಟಿಗೆ ತಂತ್ರಿಗಳಿಗೆ ಮೂರನೆ ದೀವಿಟಿಗೆ ಗುತ್ತಿನವರಿಗೆ. ದೇವರಬಲಿ ಹೊರಡುವುದು- ವಾದ್ಯ, ವಾಲಗದೊಂದಿಗೆ ದೇವಳದ ಒಳಾಂಗಣದಲ್ಲಿ ಎರಡು ಸುತ್ತುಬಲಿ ಆಗಿ ದೇವಳದ ಹೊರಾಂಗಣದ ದ್ವಜಸ್ಥಂಭದ ಬುಡದಲ್ಲಿ [ಪಟಾವು] ಚೆಂಡೆ ಬಾರಿಸಿ ದೀವಿಟಿಗೆ ಹೊರಾಂಗಣಕ್ಕೆ ಬರುವುದು ಆಮೇಲೆ ಪಟಾವು ಸುತ್ತು ಎರಡನೆ ಸುತ್ತಿನ ದೊಡ್ಡ ದ್ವಜ ಸ್ಥಂಭದ ಬುಡದ ದೊಡ್ಡ ಕಲ್ಲಿನ ಹತ್ತಿರ ತಂತ್ರಿಗಳು ತಂತ್ರ ತೂಕುವರು ಮೂರನೆ ದೀವಿಟಿಗೆಯನ್ನು ಕಲ್ಲಪೂಜೆಯ ಸಮಯದಲ್ಲಿ ಗುತ್ತಿನವರಿಗೆ ಹಿಡಿಯುತ್ತಾರೆ ನಾಲ್ಕನೆ ಸುತ್ತಿನಲ್ಲಿ [ಕ್ಷೇತ್ರಪಾಲ]ಕಲ್ಲಪೂಜೆಯನ್ನು ಮಾಡಿ ತಂತ್ರಿಗಳು ಒಳಗೆ ಹೋಗುವರು.ಮಳಲಿ ಕುಲಾಲ ಭಾಂದವರು ಸುಮಾರು 25ಮಂದಿ ದೀವಿಟಿಗೆಯೊಂದಿಗೆ ದೇವರ ಬಲಿ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇಲ್ಲಿಯ ಒಂದೊಂದು ಸುತ್ತು ಬಲಿಗೆ ಹೆಸರಿರುತ್ತದೆ 1ಉಡಕೆಸುತ್ತು 2ತಿಮಿಲೆಸುತ್ತು3ಇರಾನಸುತ್ತು,3ಚೆಂಡೆಸುತ್ತು ನಗಾರಿ ಸುತ್ತುಆದ ನಂತರ ಎರಡು ಸುತ್ತು ಪಂಚ ವಾದ್ಯ ಗಳೊಂದಿಗೆ ಒಂದು ಸುತ್ತು ದರ್ಶನ ಸುತ್ತುಇದೆ. ಸರ್ವ ವಾದ್ಯಗಳೊಂದಿಗೆ ಸುಬ್ರಹ್ಮಣ್ಯ ಸ್ವಾಮಿಯ ಬಲಿ ನಡೆಯುತ್ತದೆ.

30vp dandamale 1

ನಂತರ ವಸಂತ ಮಂಟಪದಲ್ಲಿ ದೇವರನ್ನು ಬೆಳ್ಳಿಯ ಉಜ್ಜಾಲಿನಲ್ಲಿ ಕುಳ್ಳಿರಿಸಿ ಮಂತ್ರಪಟಿಸಿ ಆಮೇಲೆ ಮೂರು ಸುತ್ತುಬಲಿ ಆಗಿ ಒಳಾಂಗಣದಲ್ಲಿ ಒಂದು ಸುತ್ತುಬಲಿ ಆದ ಮೇಲೆಗರ್ಭಗುಡಿಗೆ ಸುಭ್ರಹ್ಮಣ್ಯ ದೇವರನ್ನು ಕುಳ್ಳಿರಿಸಿ ತಂತ್ರಿಗಳು ಪೂಜೆ ನೆರವೇರಿಸಿದ ನಂತರ.ಹೊರಾಂಗಣದ ಗರ್ಭಗುಡಿಯ ದುರ್ಗಾಪರಮೇಶ್ವರೀ ದೇವಿಯ ಪೂಜೆಯ ನಂತರ ರಾಜರಾಜೇಶ್ಬರೀ ಅಮ್ಮನವರಿಗೆ ಮಹಾಪೂಜೆ ನೆರವೇರುವುದು.ನಂತರ ಚಿಕ್ಕ ಮೂರ್ತಿಯ ನಿತ್ಯ ಬಲಿಯು ಒಳಾಂಗಣದಲ್ಲಿ ಎರಡು ಸುತ್ತು ಹೊರಾಂಗಣದಲ್ಲಿ ಎರಡು ಸುತ್ತುಬಲಿ ನಡೆಯುತ್ತದೆ. ಇಪ್ಪತ್ತನೇ ದಂಡಮಾಲೆಯಂದು ನವಿಲು ರಥೋತ್ಸವ ನಡೆಯಲಿದೆ.ಈ ಭಾರಿ ದಂಡಮಾಲೋತ್ಸವದಂದು ಹರಕೆ ಹೊತ್ತ ಭಕ್ತರ ಅನುಕೂಲಕ್ಕಾಗಿ ದಂಡಮಾಲೋತ್ಸವದ ದಿನದಂದು ತುಲಾಭಾರ ಸೇವೆಯು ನಡೆಯುತ್ತದೆ.

DSC_4490

By suddi9

Leave a Reply

Your email address will not be published. Required fields are marked *