ಬೆಂಗಳೂರು : ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡಿ ಜನಮನ ಗೆದ್ದಿದ್ದ ಜನಪ್ರಿಯ ಕಾರ್ಯಕ್ರಮವಾಗಿರುವ ‘ಕನ್ನಡದ ಕೋಟ್ಯಾಧಿಪತಿ’ ಮತ್ತೆ ಶುರುವಾಗುತ್ತಿದೆ. ಈಗಾಗಲೇ ಮೂರು ಆವೃತ್ತಿಯಿಂದ ಎಲ್ಲರ ಗಮನ ಸೆಳೆದಿದ್ದ ಈ ಕಾರ್ಯಕ್ರಮ ಮತ್ತೆ ಶುರುವಾಗುತ್ತಿದೆ.

63464113

ಹೌದು, ಇದೀಗ ನಾಲ್ಕನೇ ಆವೃತ್ತಿ ಬರುತ್ತಿದ್ದು, ಈ ಬಾರಿ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ವಿಶೇಷವೆಂದರೆ, ಈ ಹಿಂದಿನ ಕಾರ್ಯಕ್ರಮದ ಮೂರನೇಯ ಆವೃತ್ತಿಯನ್ನು ರಮೇಶ್ ಅರವಿಂದ್ ನಿರ್ವಹಿಸಿಕೊಂಡಿದ್ದರು. ಈಗ ಮತ್ತೆ ಪುನೀತ್ ರಾಜ್ ಕುಮಾರ್ ಸಾರಥ್ಯ ವಹಿಸಿಕೊಂಡಿರುವುದು ವಿಶೇಷ.

Puneeth_KBC

ಹೀಗಾಗಿ ಚಾನಲ್ ಮಾತ್ರವಲ್ಲಾ, ಈ ಕಾರ್ಯಕ್ರಮದ ನಿರೂಪಕರೂ ಬದಲಾಗಿದ್ದಾರೆ ಎಂದು ಹೇಳಬಹುದು. ಈಗಾಗಲೇ ಈಗಾಗಲೇ ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹೊಸ ಚಾನಲ್, ಹೊಸ ಆಯಂಕರ್ ಜೊತೆಗೆ ಬರುತ್ತಿರುವ ಈ ಶೋ ಸದ್ಯದಲ್ಲಿಯೇ ಶುರುವಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸುತ್ತಿದೆ.

12puneeth-kbc

 

By suddi9

Leave a Reply

Your email address will not be published. Required fields are marked *